ಬಂಟ್ವಾಳ: ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಬಿ ಶೆಟ್ಟಿ ಶ್ರೀ ಶೈಲ ತುಂಬೆ ರವರ ಪದಗ್ರಹಣ ಸಮಾರಂಭವು ಜರಗಿತು. ಪ್ರಭಾರ ಆಡಳಿತಾಧಿಕಾರಿ ರಾಜಶೇಖರ್ , ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನವೀನ್ ಶೆಟ್ಟಿ ಮುಂಡಾಜೆ, ಸದಸ್ಯರಾದ ಅರ್ಚಕ ಶಿವರಾಮ ಶಿಬರಾಯ, ಜನಾರ್ಧನ ಸಾಲ್ಯಾನ್, ಪದ್ಮನಾಭ ರಾವ್ ಕನಪಾಡಿ, ರಮೇಶ್ ಕೊಡಂಗೆ, ಪ್ರತಿಭಾ ಪಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.