ಮೂಡುಬಿದಿರೆ: ಭಾರತದೇಶ ಭೌಗೋಳಿಕ ಭಿನ್ನತೆಯೊಂದಿಗೆ ಜೀವವೈವಿಧ್ಯ, ಸಂಸ್ಕೃತಿ ವೈವಿಧ್ಯಗಳನ್ನು ಹೊಂದಿದಂತೆಯೇ ತತ್ವ ಮತ್ತು ದರ್ಶನಗಳ ವಿಷಯದಲ್ಲೂ ವೈವಿಧ್ಯವನ್ನು ಸಾಕಾರಪಡಿಸಿರುವುದಕ್ಕೆ ನಮ್ಮಲ್ಲಿರುವ ಕಲೆ, ಸಂಸ್ಕೃತಿ, ಸಾಹಿತ್ಯ-ಆಚಾರ ವಿಚಾರ ಹಾಗೂ ತತ್ಸಂಬಂಧೀ ಗ್ರಂಥಗಳು ಮತ್ತು ಅವಿಚ್ಛಿನ್ನ ದಾರ್ಶನಿಕ ಪರಂಪರೆಯ ಜೊತಗೆ ಇನ್ನೂ ರೂಢಗೊಂಡಿರುವ ತತ್ವಾದರ್ಶಗಳು ಸಾಕ್ಷಿ ಎಂದು ಶತಾವಧಾನಿ ಡಾ.ಆರ್.ಗಣೇಶ್ ವಿಶ್ಲೇಷಿಸಿದ್ದಾರೆ.

Shathavadani
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಮೌಲಿಕ ಸಿದ್ಧಾಂತ ಸ್ನಾತಕೋತ್ತರ ವಿಭಾಗ ಸಂಯೋಜಿಸಿದ್ದ ಭಾರತ ದರ್ಶನ -ಷಡ್ದರ್ಶನಗಳ ಸಾಕ್ಷಾತ್ಕಾರ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿನಯಚಂದ್ರ ಶೆಟ್ಟಿ ಚಿಂತಕ-ಸಂಪನ್ಮೂಲ ವ್ಯಕ್ತಿ ಆರ್.ಗಣೇಶ್‍ರವರನ್ನು ಗೌರವಿಸಿದರು. ಮೌಲಿಕಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸೌಮ್ಯಾ ಪದ್ಯಾಣ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *