ಬಂಟ್ವಾಳ: ಸರಪಾಡಿ ಗ್ರಾಮದ ನಡಾಯಿ ನಿವಾಸಿ ದಿ.ಜಯಂತ ಪೂಜಾರಿ ಹಾಗೂ ವಿಶಾಲಾಕ್ಷಿ ದಂಪತಿಯ ಪುತ್ರಿ ಅಪ್ರಾಪ್ತ ವಯಸ್ಸಿನ ಆಶಾಲತಾ (15)ಳ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಸಹಿತ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೋಲಿಸರು ಬಿಜಾಪುರದಲ್ಲಿ ನಡೆಸಿದ ಯಶಸ್ವಿ ಕಾಯರ್ಾಚರಣೆಯಲ್ಲಿ ಬಂಧಿಸಿದ್ದಾರೆ.
ಬಿಜಾಪುರ ಜಿಲ್ಲೆಯ ಬಿಜ್ಜರಗಿ ನಿವಾಸಿ ಅಶೋಕ್ (32) ಹಾಗೂ ಈತನಿಗೆ ಸಹಕರಿಸಿದ ಆರೋಪದಲ್ಲಿ ಆತನ ಸ್ನೇಹಿತ ರವಿ ಯಾನೆ ನರಸಿಂಹ (40) ಬಂಧಿತ ಆರೋಪಿಗಳು. ಬಂಟ್ವಾಳ ಸಿ.ಐ.ಬೆಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಎಸ್.ಐ ನಾಗರಾಜ್ ಮತ್ತು ವಿಟ್ಲ ಠಾಣೆಯ ಪ್ರಭಾರ ಎಸ್.ಐ ಸಂಜೀವ ತಲ್ಲೂರು ನೇತೃತ್ವದ ಪೋಲಿಸರ ತಂಡ ಬಿಜಾಪುರದ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆಸಿದ ಕಾಯರ್ಾಚರಣೆಯೊಂದರಲ್ಲಿ ಆರೋಪಿಗಳಿಬ್ಬರನ್ನು ಬಂಧಿಸಿ ಮಂಗಳವಾರ ಬಂಟ್ವಾಳಕ್ಕೆ ಕರೆತಂದಿದ್ದು ಸಂಜೆಯ ವೇಳೆ ಬಂಟ್ವಾಳ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಈ ಆರೋಪಿಗಳಿಬ್ಬರನ್ನು ಬುಧವಾರ ಪೋಲಿಸ್ ಕಷ್ಟಡಿಗೆ ಪಡೆಯುವ ಸಾಧ್ಯತೆಯಿದೆಯೆಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಾಲಕಿಯ ಚಿಕ್ಕಮ್ಮ ಸವಿತಾ ಹಾಗೂ ಅಪಹರಣದ ಪ್ರಮುಖ ಸೂತ್ರದಾರ ಅಶೋಕ್ನ ಚಿಕ್ಕಪ್ಪ ಬಸವರಾಜು ಎಂಬವರನ್ನು ಈ ಹಿಂದೆಯೇ ಬಂಧಿಸಲಾಗಿದ್ದು ಸದ್ಯ ಇವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಳಿಕ ಅಪಹರಣಕ್ಕೊಳಗಾಗಿದ್ದ ಶಾಲಾ ಬಾಲಕಿ ಆಶಾಲತಾಳನ್ನು ಬೆಳಗಾಂನ ಅಥೇಣಿ ಕೊಂಪಲ ಬಳಿ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದರು. ಬಾಲಕಿ ಪ್ರಸ್ತುತ ರಿಮಾಂಡ್ ಹೋಮ್ನ ವಶದಲ್ಲಿದ್ದಾಳೆ. ಕಳೆದ ಮಾಚರ್್ 17ರಂದು ನಾವೂರು ಸಕರ್ಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾಥರ್ಿನಿ ಆಶಾಲತಾ ಚಿಕ್ಕಮ್ಮನ ಜೊತೆಗೆ ಚಪ್ಪಲಿ ಖರೀದಿಸಲು ಬಂಟ್ವಾಳ ಪೇಟೆಗೆ ತೆರಳಿದವಳು ಬಳಿಕ ನಾಪತ್ತೆಯಾಗಿದ್ದಳು. ಆರೋಪಿ ಅಶೋಕ ದ್ರಾಕ್ಷೆ ವ್ಯಾಪಾರಕ್ಕಾಗಿ ಮಂಗಳೂರಿಗೆ ಬರುತ್ತಿದ್ದ ಎನ್ನಲಾಗಿದ್ದು ತರುಣಿಯ ಜೊತೆಗೆ ಸಂಪರ್ಕ ಆಗಿತ್ತು. ಬಳಿಕ ಆಕೆಯನ್ನು ಅಪಹರಿಸಲಾಗಿತ್ತು.ಪ್ರಕರಣದ ಹಿಂದೆ ನಾನಾ ಊಹಾಪೋಹಗಳು ಕೂಡಾ ಹಬ್ಬಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪ್ರಮುಖ ಆರೋಪಿ ಅಶೋಕ ಬಂಧನದೊಂದಿಗೆ ಬಿಡಿಸಲಾಗದ ಕಗ್ಗಂಟಾಗಿದ್ದ ಈ ಪ್ರಕರಣದಿಂದ ಪೋಲಿಸರು ನಿಟ್ಟುಸಿರು ಬಿಟ್ಟಿದ್ದಾರೆ. ಪೋಲಿಸ್ ಸಿಬ್ಬಂದಿಗಳಾದ ರಘುರಾಮ ಹೆಗ್ಡೆ,ಜಯಕುಮಾರ್,ರಕ್ಷಿತ್,ಕುಮಾರ್ರವರು ಕಾಯರ್ಾಚರಣೆಯಲ್ಲಿ ಭಾಗವಹಿಸಿದ್ದರು.


