ಮೂಡುಬಿದಿರೆ : ಗ್ರಾಮಸ್ಥನೋರ್ವ ಗ್ರಾಮಸಭೆಯಲ್ಲಿ ಸದಸ್ಯನ ತಪ್ಪುಗಳ ಬಗ್ಗೆ ಸಭೆಯ ಮುಂದಿಟ್ಟ ಎಂಬ ಕಾರಣಕ್ಕಾಗಿ ಗ್ರಾಮಸಭೆ ಮುಗಿದ ನಂತರ ಗ್ರಾಮಸ್ಥನಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ತೆಂಕಮಿಜಾರಿನಲ್ಲಿ ಬುಧವಾರ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಲಿಂಗಪ್ಪ ಗೌಡ ಅವರು ತೆಂಕಮಿಜಾರು ಗ್ರಾ.ಪಂನಲ್ಲಿ ಅಧ್ಯಕ್ಷ ಬಾಲಕೃಷ್ಣ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸುತ್ತಿನ ಗ್ರಾಮ ಸಭೆಯಲ್ಲಿ ಮಾತನಾಡಿ ” ಬಡವರು ಅಕ್ರಮವಾಗಿ ಮನೆ ಕಟ್ಟಿ ಕುಳಿತರೆ ಪಂಚಾಯತ್‍ನ ಅಧ್ಯಕ್ಷರು ಮತ್ತು ಪಿಡಿಓ ಅವರು ಬಂದು ಅದನ್ನು ತೆರವುಗೊಳಿಸುತ್ತಾರೆ. ಆದರೆ ಪಂಚಾಯತ್‍ನ ಓರ್ವ ಸದಸ್ಯರೇ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದು ಈ ಬಗ್ಗೆ ಪಂಚಾಯತ್ ಯಾವ ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದರು. ಅಲ್ಲದೆ ಅಕ್ರಮವಾಗಿ ಮನೆ ಕಟ್ಟಿರುವ ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಮತ್ತು ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅವರು ಭೇಟಿ ನೀಡಿದಾಗ ಅವರಿಗೆ ಸದಸ್ಯ ಬಾಯಿ ಬಂದಂತೆ ಬೈದಿದ್ದಾರೆ ಸದಸ್ಯರೇ ಹೀಗೆ ಮಾಡಿದರೆ ಇನ್ನು ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದ್ದರು.27 mood thenkamijaru halle (2)

???????????????????????????????

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ಅವರು ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದ ಸ್ಥಳಕ್ಕೆ ತಾವು ಭೇಟಿ ನೀಡಿ ಕ್ರಮಕೈಗೊಂಡಿದ್ದೇವೆ ಎಂದು ಉತ್ತರಿಸಿದ್ದರು. ಆದರೆ ಗ್ರಾಮಸಭೆ ಮುಗಿದು ಸಭಾಭವನದ ಹೊರಗೆ ಬಂದ ನಂತರ ಪಂಚಾಯತ್ ಸದಸ್ಯ ಶಶಿಕಾಂತ ಶೆಟ್ಟಿಗಾರ್ ಅವರು ಲಿಂಗಪ್ಪ ಗೌಡ ಅವರಿಗೆ ಹಲ್ಲೆ ನಡೆಸಿ ಗ್ರಾಮಸಭೆಯಲ್ಲಿ ತನ್ನ ವಾರ್ಡಿನ ಸಮಸ್ಯೆಗಳ ಬಗ್ಗೆ ನೀನು ಮಾತನಾಡಲು ಯಾರು ಎಂದು ಪ್ರಶ್ನಿಸಿದರಲ್ಲನೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಸದಸ್ಯ ಶಶಿಕಾಂತ ಅವರ ಸಹೋದರಿ, ಗ್ರಾ.ಪಂನ ಮಾಜಿ ಸದಸ್ಯೆಯು ಸಹೋದರನ ಸಹಾಯಕ್ಕೆ ನಿಂತು ” ನೀನು ಯಾವಾಗಲೂ ಗ್ರಾಮಸಭೆಯಲ್ಲಿ ವೈಯಕ್ತಿಕವಾಗಿ ನಿಂದಿಸುತ್ತಿಯಾ” ಪದೇ ಪದೇ ಯಾಕೆ ಅವನನ್ನೇ ಬೊಟ್ಟು ಮಾಡಿ ಮಾತನಾಡುತ್ತೀಯ ಎಂದು ಪ್ರಶ್ನಿಸಿರದಲ್ಲದೆ ಆಕೆಯೂ ಕೂಡಾ ಸಹೋದರನ ತಪ್ಪಿಲ್ಲವೆಂಬಂತೆ ಮಾತನಾಡಿದರು.

ನಂತರ ಪಂಚಾಯತ್‍ನ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ,ಮಾಜಿ ಅಧ್ಯಕ್ಷರುಗಳಾದ ಹಸನ್ ಮತ್ತು ರಮೇಶ್ ಶೆಟ್ಟಿ ಅವರು ಇಬ್ಬರಿಗೂ ಜಗಳ ಮಾಡುವುದಾದರೇ ಪಂಚಾಯತ್ ಆವರಣದಿಂದ ಹೊರಗೆ ಹೋಗಿ ಜಗಳವಾಡಿ ಎಂದು ತಿಳಿಸಿ ಸಮಧಾನಿಸಿ ಹೊರಗೆ ಕಳುಹಿಸಿದರು.

 

By suddi9

Leave a Reply

Your email address will not be published. Required fields are marked *