ಕನ್ಯಾನದ ಬಾಳೆಕೋಡಿಯ ಶಿಲಾಂಜನ ಕ್ಷೇತ್ರದಲ್ಲಿ ಸತ್ಯನಾರಾಯಣ ಪೂಜೆ ಮತ್ತು ಸರಣಿ ತಾಳಮದ್ದಳೆ ಕಾರ್ಯಕ್ರಮದ ಪ್ರಯುಕ್ತ ಯಕ್ಷಸಿಂಧೂರ ಪ್ರತಿಷ್ಠಾನ ವಿಟ್ಲ ಇವರಿಂದ `ಪಾರ್ಥ ಸಾರಥ್ಯ’ ಎಂಬ ಯಕ್ಷಗಾನ ತಾಳ ಮದ್ದಳೆಯು ನಡೆಯಿತು. ಭಾಗವತಿಕೆಯಲ್ಲಿ ಸಹಕರಿಸಿದ ಕ್ಷೇತ್ರದ ಶ್ರೀ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಗವತರಾಗಿ ಪ್ರಭಾ ಬಿ ಚಣಿಲ, ಚೆಂಡೆ ಮದ್ದಳೆ ವಾದಕರಾಗಿ ಪಕಳಕುಂಜ ಶ್ಯಾಂ ಭಟ್, ಕುಮಾರ ಆಚಾರ್ಯ ಮತ್ತು ಶೃತಿಯಲ್ಲಿ ಧನ್ಯಶ್ರೀ ಸಹಕರಿಸಿದರು. ಅರ್ಥಧಾರಿಗಳಾಗಿ ಚಣಿಲ ಸುಬ್ರಹ್ಮಣ್ಯ ಭಟ್, ಉಂಡೆಮನೆ ಕೃಷ್ಣ ಭಟ್, ಪಶುಪತಿ ಶಾಸ್ತ್ರಿ, ಸಾವಿತ್ರಿ ಶಾಸ್ತ್ರಿ, ಮಂಗೇಶ್ ಭಟ್ ಮತ್ತು ಎಲ್ ಎನ್ ಭಟ್ ಮಳಿ ಭಾಗವಹಿಸಿದ್ದರು.