ಬೊಳ್ನಾಡು: ಶ್ರೀ ಭಗವತೀ ಯುವ ಜನ ಸಂಘದ ವತಿಯಿಂದ ಒಕ್ಟೋಬರ್ 2 ರಂದು ನಡೆಯುವ ಸತ್ಯನಾರಾಯಣ ಪೂಜೆ ಹಾಗೂ ಇನ್ನಿತರ ಸೇವಾ ಚಟುವಟಿಕೆಗಳ ಬಾಬ್ತು ಪೂರ್ವಭಾವಿ ಸಭೆಯು ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ವಲಯಗಳ ಸದಸ್ಯರ ಸಲಹೆ ಸಹಾಯವನ್ನು ಕೋರಲಾಯಿತು.

theeya ಈ ಕಾರ್ಯಕ್ರಮದಲ್ಲಿ ಬೊಳ್ನಾಡು ಶ್ರೀ ಭಗವತೀ ತೀಯ ಸಮಾಜ ಸೇವಾ ಸಮಿತಿಯ ಕಾರ್ಯದರ್ಶಿ ಆನಂದ ಕಲ್ಲಕಟ್ಟ ಮಾರ್ಗದರ್ಶನ ನೀಡಿದರು. ಸಂಘದ ಗೌರವಾಧ್ಯಕ್ಷ ಮೋನಪ್ಪ ಮೂಡಾಯಿಬೆಟ್ಟು. ಅಧ್ಯಕ್ಷ ರಾಜೇಶ್ ಕರವೀರ, ಉಪಾಧ್ಯಕ್ಷ ಮೋಹನ ಕುದ್ದುಪದವು, ಸುರೇಶ್ ಮುಂತಾದವರು ಭಾಗವಹಿಸಿದ್ದರು. ಯುವ ಜನ ಸಂಘದ ಕಾರ್ಯದರ್ಶಿ ಸತೀಶ್ ವಿಟ್ಲ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *