ಬಂಟ್ವಾಳ:ಬಂಟ್ವಾಳ ಕಸ್ಬಾ ಗ್ರಾಮದ ಕಮಲ್‍ಕಟ್ಟೆ ನಿವಾಸಿ, ಮುಸ್ಲಿಂ ಲೀಗ್‍ನ ಹಿರಿಯ ಮುಖಂಡ ಶೇಖ್ ಇಬ್ರಾಹಿಂ ಸಾಹೇಬ್ (75) ಇವರು ಅಸೌಖ್ಯದಿಂದ ಶುಕ್ರವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮತರಿಗೆ ಪತ್ನಿ, ಐವರು ಪುತ್ರರು ಮತ್ತು ಐವರು ಪುತ್ರಿಯರು ಇದ್ದಾರೆ.ಬಂಟ್ವಾಳ ಕೆಳಗಿನಪೇಟೆಯಲ್ಲಿ ಕಳೆದ 15ವರ್ಷ ‘ಮಿಲ್ಲತ್’ ಪ್ರಿಂಟರ್ಸ್ ಸಂಸ್ಥೆ ನಡೆಸುತ್ತಿದ್ದ ಇವರು ಬಳಿಕ ‘ಮಿಲ್ಲತ್’ ವಾರಪತ್ರಿಕೆ ನಡೆಸುವ ಮೂಲಕ ಮುಸ್ಲಿಮರ ಸಂಘಟನೆಗೆ ಶ್ರಮಿಸಿದ್ದರು. ಬಂಟ್ವಾಳ ಕೆಳಗಿನಪೇಟೆ ಜುಮ್ಮಾ ಮಸೀದಿ ಅಧ್ಯಕ್ಷರಾಗಿ, ಮುಸ್ಲಿಂ ಲೀಗ್‍ನ ಜಿಲ್ಲಾ ಉಪಾಧ್ಯಕ್ಷರಾಗಿ, ರಾಜ್ಯ ಕಾರ್ಯದರ್ಶಿಯಾಗಿ, ಎಸ್‍ಕೆಎಸ್‍ಎಸ್‍ಎಫ್ ಸಮಸ್ತ ಮುಖಂಡರಾಗಿಯೂ ಶ್ರಮಿಸಿದ್ದರು.ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಬಂಟ್ವಾಳ ಕೆಳಗಿನಪೇಟೆ ಮಸೀದಿ ಬಳಿ ನೆರವೇರಿತು.29BTL-Sheik Ibrahim Saheb
ಸಂತಾಪ:
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಪುರಸಭೆ ನಾಮನಿರ್ದೇಶಿತ ಸದಸ್ಯ ನಾರ್ಬರ್ಟ್ ರಾಡ್ರಿಗಸ್, ಮುಸ್ಲಿಂ ಲೀಗ್‍ನ ರಾಷ್ಟ್ರೀಯ ಉಪಾಧ್ಯಕ್ಷ ದಸ್ತಗೀರ್ ಆಗಾ, ರಾಜ್ಯಾಧ್ಯಕ್ಷ ಎನ್.ಜಾವೇದ್, ರಾಜ್ಯ ಸಮಿತಿ ಸದಸ್ಯ ಸಿದ್ದಿಕ್ ಅಬ್ದುಲ್ ಖಾದರ್, ಮುಖಂಡ ಅಹ್ಮದ್ ಭಾಷಾ ತಂಙಳ್, ಜಿಲ್ಲಾ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್ ಅಧ್ಯಕ್ಷ ನೌಶಾದ್ ಮಲಾರ್ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *