ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವಕ್ಕೆ ಪೂರಕವಾಗಿ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಆಯೋಜನೆಯಲ್ಲಿ ಆಗಸ್ಟ್ 14ರಂದು 25ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ ನಡೆಯಲಿದೆ.ಆಗಸ್ಟ್ 14ರಂದು ಬೆಳಿಗ್ಗೆ 9 ಗಂಟೆಯಿಂದ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮುದ್ದು ಕೃಷ್ಣ ಸ್ಪರ್ಧೆ: 1 ರಿಂದ 2ವರ್ಷ, 2ರಿಂದ 4ವರ್ಷ, 4ರಿಂದ 6 ವರ್ಷ, 6 ರಿಂದ 8 ವರ್ಷ, ಮತ್ತು 8 ರಿಂದ 10ವರ್ಷ (ಶ್ರೀಕೃಷ್ಣ) ಹೀಗೆ 5 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲೆರಡು ವಿಭಾಗಗಳಿಗೆ ಗರಿಷ್ಠ ಒಂದೂವರೆ ನಿಮಿಷದ ಕಾಲಾವಧಿಯಿದ್ದು ಉಳಿದ ವಿಭಾಗಗಳಿಗೆ 2 ನಿಮಿಷಗಳ ಸಮಯವಿದೆ. ಜನನ ಪ್ರಮಾಣ ಪತ್ರ ಕಡ್ಡಾಯವಾಗಿದ್ದು, ಕ್ಯಾಸೆಟ್ ಅಥವಾ ಸಿಡಿ ಬಳಸಬಹುದಾಗಿದೆ.
ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ: 4ರಿಂದ 7ನೇ ತರಗತಿ (ಮುದ್ದು ಕೃಷ್ಣ), ಹೈಸ್ಕೂಲು (ಶ್ರೀಕೃಷ್ಣ), ಮತ್ತು ಕಾಲೇಜು (ಯಶೋದೆ – ಕೃಷ್ಣ) ಈ ಮೂರು ವಿಭಾಗಗಳಲ್ಲಿ ಸ್ಥಳದಲ್ಲೇ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದ್ದು ಬೇಕಾದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಎಲ್ಲಾ ವಿಭಾಗಗಳಲ್ಲೂ ಬಹುಮಾನಗಳನ್ನು ನೀಡಲಾಗುತ್ತಿದ್ದು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ, ಸ್ಮರಣಿಕೆ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ :
ಬಿ. ಜಗನ್ನಾಥ ರಾವ್ (9449913573)
ರಾಜೇಶ್ (9945998412), ಬಿ. ಸುರೇಶ್ ರಾವ್ (9448812368)
ಅಥವಾ ಸಂಚಾಲಕ ಸಂತೋಷ್ ಕುಮಾರ್ (9880237557)