ಮೂಡುಬಿದಿರೆ: ಪ್ರದಾನಿ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ 2015ರ ಜುಲೈ ತಿಂಗಳಲ್ಲಿ `ರಸ್ತೆ ಸುರಕ್ಷತೆ’ ಕುರಿತಾಗಿ ಸಲಹೆ ನೀಡಿದ್ದ, ಮೂಡುಬಿದಿರೆಯ ಡಾ. ಪ್ರಸನ್ನ ಕಾಕುಂಜೆ ಈ ಬಾರಿ `ಮನ್ ಕೀ ಬಾತ್’ ಮತ್ತು `ಮೈ ಗೌ’ನ ದ್ವಿತೀಯ ವಾರ್ಷಿಕೋತ್ಸವದಲ್ಲಿ ಆಗಸ್ಟ್ 6ರಂದು ಪಾಲ್ಗೊಂಡಿದ್ದಾರೆ. ಪ್ರಸನ್ನ ಅವರಿಗೆ ಮೊದಲು ದೂರವಾಣಿ ಹಾಗೂ ಆಗಸ್ಟ್ 4ರಂದು ಆಮಂತ್ರಣ ಪತ್ರ ತಲುಪಿದೆ. ಶನಿವಾರ ಮುಂಜಾನೆ 9.30ರಿಂದ ಸಂಜೆ ಗಂ. 5ರವರೆಗೂ ನಡೆದ ದೇಶದ ವಿವಿಧ ವಿಷಯಗಳ ಬಗ್ಗೆ ಚರ್ಚೆ, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮೋದಿಯವರ ಪ್ರಸನ್ನ ಅವರನ್ನು ಅಭಿನಂದಿಸಿರುವುದು ಮಾತ್ರವಲ್ಲ, ಅವರೊಂದಿಗೆ ಭಾವಚಿತ್ರವನ್ನೂ ತೆಗೆಸುವ ಅವಕಾಶ ಲಭಿಸಿತು. 1500 ಮಂದಿ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.mbd_aug9_5 (2)

mbd_aug9_5 (1)
ಪ್ರಜಾಪ್ರಭುತ್ವದ ನಿಜಾರ್ಥವನ್ನು ಸಾಕಾರಗೊಳಿಸುವ ಪ್ರದಾನಿ ಮೋದಿಯವರ ಮನ್‍ಕೀ ಬಾತ್, ಮೈ ಮೈ ಗೌ ಯೋಜನೆಗಳ ಮೂಲಕ ಪ್ರಜ್ಞಾವಂತ ನಾಗರಿಕರು ದೇಶವನ್ನು ಪ್ರಗತೊಪಥದತ್ತ ಕೊಂಡೊಯ್ಯಬೇಕು ಎಂದು ಮೂಡುಬಿದಿರೆಯ ಮಿತ್ತಬಿರಾವುನಲ್ಲಿ `ಕಾಕುಂಜೆ ಆಯುರ್ವೇದ ವೆಲ್‍ನೆಸ್ ಹೋಂ’ನ ನಡೆಸುತ್ತಿರುವ ಡಾ.ಪ್ರಸನ್ನ ಕಾಕುಂಜೆ ಪತ್ರಿಕೆಗೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *