ಮೂಡುಬಿದಿರೆ: ಇಲ್ಲಿನ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯ ವತಿಯಿಂದ ವರಮಹಾಲಕ್ಷ್ಮೀ ಪೂಜೆಯು ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು. ಬೆಳಿಗ್ಗೆ ಕಳಶ ಪ್ರತಿಷ್ಠೆ, ಲಲಿತಾ ಸಹಸ್ರನಾಮ ಪರಾಯಣ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ ನಡೆಯಿತು. 

ಇದೇ ಸಂಧರ್ಭದಲ್ಲಿ ಹೂ ಕಟ್ಟುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶಾಂತಲಾ ಸೀತಾರಾಮ ಆಚಾರ್ಯ, ದ್ವಿತೀಯ ಬಹುಮಾನ ಪಡೆದ ಪ್ರಜ್ಞಾ ಬನ್ನಡ್ಕ, ತೃತೀಯ ಸ್ಥಾನ ಪಡೆದ ಹೇಮಾ ಯೋಗೀಶ ಆಚಾರ್ಯ, ಹೊಸಬೆಟ್ಟು ಹಾಗೂ ಸಮಾಧಾನಕರ ಬಹುಮಾನ ಪಡೆದ ಪ್ರಮೀಳ ಹರೀಶ್ ಆಚಾರ್ಯ, ಹೊಸಬೆಟ್ಟು ಅವರಿಗೆ ಬಹುಮಾನ ವಿತರಿಸಲಾಯಿತು.
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಆಚಾರ್ಯ, ಮೊಕ್ತೇಸರರಾದ ಜಯಕರ ಆಚಾರ್ಯ, ಬಾಲಚಂದ್ರ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಮಾಲತಿ ರಾಮಚಂದ್ರ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶಿವರಾಮ ಆಚಾರ್ಯ, ಉಳಿಯ ಉಪಸ್ಥಿತರಿದ್ದರು. ಕೇಶವ ಪುರೋಹಿತ್ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.