ಕೈಕಂಬ:ಗುರುಪುರ ಕೈಕಂಬದ ಲಯನ್ಸ್ ಕ್ಲಬ್‍ನ ವತಿಯಿಂದ ಸಹಾಯರ್ಥವಾಗಿ ತುಳುನಾಟಕ “ಪನಿಯರೆ ಆವಂದಿನ” ಗುರುಪುರ ಕೈಕಂಬದ ಪೊಂಪೈ ಸ್ಕ್ಪೇರ್‍ನ ಸಭಾಂಗಣದಲ್ಲಿ ಅ.21 ಅದಿತ್ಯವಾರ ನಡೆಯಿತು. ವೇದಿಕೆಯಲ್ಲಿ ಲಯನ್ ಉಪರಾಜ್ಯಪಾಲರಾದ ದೇವದಾಸ್ ಭಂಡಾರಿ ,ಜಿಲ್ಲಾ ಖಜಾಂಜಿ ಲಯನ್ ದೇವಿಪ್ರಸಾದ್ ರಾವ್, ಜಿಲ್ಲಾ ಕೋ-ಒರ್‍ಡಿನೇಟರ್ ಲಯನ್ ಸುನೀಲ್ ಹೆಗ್ಡೆ, ಲಯನ್ಸ್ ಅಧ್ಯಕ್ಷರಾದ ಲಯನ್ ಪೆಲಿಕ್ಸ್ ವಾಲ್ಪರ್ ಪೆರ್ನಾಂಡಿಸ್, ನವಮಿ ಮಾಲಕರಾದ ನಂದಕುಮಾರ್ ಕುಡ್ವ ಉಪಸ್ಥಿತರಿದ್ದರು. ಸ್ನೇಹ ಸದನ ಜೀವದಾನದವರಿಗೆ ಸಹಾಯಧನ ನೀಡಲಾಯಿತು. ಪರಿಸರದ ಎಸ್‍ಎಸ್‍ಎಲ್‍ಸಿ ಅಧಿಕ ಅಂಕ ಗಳಿಸಿದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಹಾಗೂ ಪಿ.ಯು.ಸಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಲಾಯಿತು. ಪೊಂಪೈ ಸ್ಪೋಟ್ಸ್ ಮತ್ತು ಕಲ್ಚರಲ್ ಸಂಸ್ಥೆಯವರು ಸಹಾಯಧನ ನೀಡಿದರು. ನಂತರ ದೇವದಾಸ್ ಕಾಪಿಕಾಡ್‍ರವರ ನಾಟಕ ನಡೆಯಿತು.ಮುಖ್ಯವಾಗಿ ಏಡ್ಸ್ ಸಂಸ್ಥೆ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಸಹಾಯರ್ಥವಾಗಿ ಈ ನಾಟಕ ನಡೆಯಿತು.ಕಾರ್ಯದರ್ಶಿ ಎನ್‍ಎಸ್ ಮಾಧವ ಮಯ್ಯ ಕಾರ್ಯಕ್ರಮ ನಿರೂಪಿದರು. ಲಯನ್ಸ್‍ನ ಅಧ್ಯಕ್ಷರು ಸ್ವಾಗತಿಸಿದರು. ಸ್ವಚ್ಚಭಾರತ ಅಧ್ಯಕ್ಷರಾದ ಲಯನ್ ಜೆಪ್ರಿನ್‍ತೌರೋ ವಂದಿಸಿದರು.

