ಬಂಟ್ವಾಳ: ರಕ್ತಕ್ಕೆ ಪರ್ಯಾಯವಾದ ವ್ಯವಸ್ಥೆಯೇ ಇಲ್ಲ. ರಕ್ತದಾನದಿಂದಷ್ಟೇ ರಕ್ತವನ್ನು ಸಂಗ್ರಹಿಸಿ ವ್ಯಕ್ತಿಯ ಪ್ರಾಣ ಉಳಿಸಬಹುದು. ರಕ್ತದಾನ ಅತ್ಯಂತ ಪುಣ್ಯದಾಯಕ ಕೆಲಸ ಎಂದು ಬಂಟ್ವಾಳದ ವೈದ್ಯಾಧಿಕಾರಿ ಡಾ. ಸುರೇಂದ್ರನಾಥ್ ನಾಯಕ್ ಹೇಳಿದರು.
ದ.ಕ.ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಇದರ ಬಂಟ್ವಾಳ ವಲಯ ಹಾಗೂ ಸೇವಾ ಭಾರತಿ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬಂಟ್ವಾಳದ ಯಶವಂತ ವ್ಯಾಯಮ ಶಾಲೆಯಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಂತ ವ್ಯಕ್ತಿಗಳು ನಿರ್ಭೀತಿಯಿಂದ ರಕ್ತದಾನ ಮಾಡಬಹುದಾಗಿದ್ದು ಇದರಿಂದಾಗಿ ಅವರ ಆರೋಗ್ಯ ಮತ್ತಷ್ಟು ಉತ್ತಮಗೊಳ್ಳುತ್ತದೆ ಎಂದರು. ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯದ ಅಧ್ಯಕ್ಷ ರಾಜೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿ ಆಸ್ಪತ್ರ್ರೆಯ ವೈದ್ಯೆ ಡಾ. ಸೋನಾಲಿ, ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಉಪಾಧ್ಯಕ್ಷ ದಿನೇಶ್ ಕುಮಾರ್, ಸೇವಾ ಭಾರತಿಯ ದಾಮೋದರ ನೆತ್ತರಕೆರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಕಾರ್ಯದರ್ಶಿ ಜಗದೀಶ ರೈ, ಕೋಶಾಧಿಕಾರಿ ವಿಶ್ವನಾಥ ಬಿ., ಸಂಘಟನಾ ಕಾರ್ಯದರ್ಶಿ ಗಣೇಶ್ ಸುವರ್ಣ ವೇದಿಕೆಯಲ್ಲಿದ್ದರು. ಉಪಾದ್ಯಕ್ಷರಾದ ಸುಧೀರ್ ಬೈಪಾಸ್, ರಾಜೇಂದ್ರ ಮಾಣಿ, ಜೊತೆ ಕಾರ್ಯದರ್ಶಿಗಳಾದ ಭಾಸ್ಕರ ಕುಲಾಲ್, ರಮೇಶ್ ಭಂಡಾರಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಡಾ. ಸುರೇಂದ್ರ ನಾಯಕ್ ಅವರನ್ನು ಸನ್ಮನಿಸಲಾಯಿತು. ಪೂವಪ್ಪ ಪೂಜಾರಿ ಅವರ ಪತ್ನಿ ಪುಷ್ಪ ಅವರಿಗೆ ಧನಸಹಾಯದ ಚೆಕ್ ವಿತರಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಸುಧಾಕರ ಸಾಲ್ಯಾನ್ ಸ್ವಾಗತಿಸಿ, ಸದಸ್ಯ ಸಿದ್ದೀಕ್ ವಂದಿಸಿದರು. ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ: ರಕ್ತದಾನ ಶಿಬಿರವನ್ನು ವೈದ್ಯಾಧಿಕಾರಿ ಡಾ.ಸುರೇಂದ್ರ ನಾಯಕ್ ಉದ್ಘಾಟಿದರು.