ರೂ 60.75ಲಕ್ಷ ಲಾಭ, ಶೇ.15 ಡಿವಿಡೆಂಡ್
ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯು ಕಳೆದ ಸಾಲಿನಲ್ಲಿ ಒಟ್ಟು ರೂ 130ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ 60.75ಲಕ್ಷ ನಿವ್ವಳ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ.15ಡಿವಿಡೆಂಡ್ ವಿತರಿಸಿದೆ ಎಂದು ಸೊಸೈಟಿ ಅಧ್ಯಕ್ಷ ಎಂ.ನಾರಾಯಣ ಸಪಲ್ಯ ಕಡೇಶ್ವಾಲ್ಯ ಇವರು ಹೇಳಿದ್ದಾರೆ.
ತಾಲ್ಲೂಕಿನ ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

28btl-Sanman
ಪಾಣೆಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆಯು ಚೇಳೂರು, ತುಂಬೆ, ಕಲ್ಲಡ್ಕ, ಸಜಿಪನಡು, ಬಂಟ್ವಾಳ ಪೇಟೆಯಲ್ಲಿ ಗಣಕೀಕೃತ ಶಾಖೆ ಮೂಲಕ ಪಾರದರ್ಶಕ ವ್ಯವಹಾರ ನಡೆಸುತ್ತಿದೆ. ಒಟ್ಟು ರೂ 35.58ಕೋಟಿಗೂ ಮಿಕ್ಕಿ ಸಾಲ ನೀಡಿ, ಶೇ. 90ರಷ್ಟು ಸಾಲ ವಸೂಲಾತಿ ನಡೆದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಖೆಗಳನ್ನು ವಿಸ್ತರಿಸುವುದರ ಜೊತೆಗೆ ಸದಸ್ಯರ ಸಂಖ್ಯೆ ವೃದ್ಧಿಸಿ ಪಾಲು ಬಂಡವಾಳ ಮತ್ತು ಠೇವಣಾತಿ ಹೆಚ್ಚಳ ಬಗ್ಗೆ ಶ್ರಮಿಸಲಾಗುತ್ತದೆ ಎಂದರು.
ಇದೇ ವೇಳೆ ಸೊಸೈಟಿ ಸ್ಥಾಪಕ ಸದಸ್ಯರಾದ ಬಿ.ಮಂಜುನಾಥ ಸಪಲ್ಯ ಪರವಾಗಿ ಅವರ ಪುತ್ರ ಬಿ.ಯೋಗೀಶ ಸಪಲ್ಯ, ಡಾ.ಎಚ್.ಪಿ.ಸಪಳಿಗ ಮಾರ್ನಬೈಲು, ದೇವಪ್ಪ ಸಪಲ್ಯ ಕಾಡುಮಠ, ಸುಂದರ ಮಲಾರ್ ಕಲ್ಲಡ್ಕ, ಕಮಲಾಕ್ಷಿ ನಾರಾಯಣ ಸಪಲ್ಯ ಜಕ್ರಿಬೆಟ್ಟು ಇವರನ್ನು ಸನ್ಮಾನಿಸಲಾಯಿತು. ನೂತನ ಬಸ್‍ನಿಲ್ದಾಣ ನಿರ್ಮಿಸಿದ ಉದ್ಯಮಿ ಉಮೇಶ ಬೋಳಂತೂರು ಇವರನ್ನು ಅಭಿನಂದಿಸಲಾಯಿತು.
ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ, ಸೊಸೈಟಿ ನಿರ್ದೇಶಕರಾದ ಲಿಂಗಪ್ಪ ಕರ್ಕೇರ, ದಿನೇಶ ಬಂಗೇರ, ಪುರುಷೋತ್ತಮ ಎಸ್., ತಾರನಾಥ, ಅಚ್ಚುತ್ ವಿ.ಎಸ್., ಸುನಿತಾ ಪದ್ಮನಾಭ, ವೀಣಾ ವಿಶ್ವನಾಥ ಮತ್ತಿತರರು ಇದ್ದರು.
ಸೊಸೈಟಿ ಅಧ್ಯಕ್ಷ ಎಂ.ನಾರಾಯಣ ಸಪಲ್ಯ ಕಡೇಶ್ವಾಲ್ಯ ಸ್ವಾಗತಿಸಿ, ಉಪಾಧ್ಯಕ್ಷ ಜನಾರ್ದನ ಜಕ್ರಿಬೆಟ್ಟು ವಂದಿಸಿದರು. ಕಾರ್ಯನಿರ್ವಹಣಾಧಿಕಾರಿ ವಸಂತ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕ ಗಣೇಶ ಪಜೀರು ಕಾರ್ಯಕ್ರಮ ನಿರೂಪಿಸಿದರು.
—

By suddi9

Leave a Reply

Your email address will not be published. Required fields are marked *