ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ಸಮೀಪದ ಅಮ್ಟೂರು ಎಂಬಲ್ಲಿ ಅಕ್ರಮ ಜಾನುವಾರು ಸಾಗಿಸುತ್ತಿದ್ದ ಎ.ಆರ್.ಕೆ. ಕಾಗರ್ೊ ಲಾಜಿಸ್ಟಿಕ್ ಎಂಬ ಹೆಸರಿನ ಪಾಸರ್ೆಲ್ ಸಾಗಾಟದ ಟೆಂಪೋವೊಂದು ಭಾನುವಾರ ಬೆಳಿಗ್ಗೆ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಮೂರು ಜಾನುವಾರು ಸಾವನ್ನಪ್ಪಿದ ಘಟನೆ ನಡೆದಿದೆ. ಭಾನುವಾರ ಬೆಳಿಗ್ಗೆ ಇಲ್ಲಿನ ಕರಿಂಗಾನ ಚರ್ಚ್ ಬಳಿ ತಿರುವು ರಸ್ತೆಯಲ್ಲಿ ಪಾಸರ್ೆಲ್ ಸಾಗಾಟದ ಮಿನಿ ಟೆಂಪೋದಲ್ಲಿ ಭಾರೀ ವೇಗವಾಗಿ ಹಾಸನದಿಂದ ಕೇರಳ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದರು ಎನ್ನಲಾಗಿದೆ.

28btl-Januvaruಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಹಿಂಸಾತ್ಮಕವಾಗಿ ತುಂಬಿದ್ದ ಒಟ್ಟು 11ಜಾನುವಾರುಗಳ ಪೈಕಿ ಮೂರು ಜಾನುವಾರು ಸಾವನ್ನಪ್ಪಿದೆ. ಇದರಿಂದಾಗಿ ಚಾಲಕ ಮತ್ತು ನಿವರ್ಾಹಕ ಟೆಂಪೋದಲ್ಲಿ ಎದುರಿನ ಗಾಜು ಒಡೆದು ಸ್ಥಳದಿಂದ ಪರಾರಿಯಾಗಿದ್ದರು. ತಕ್ಷಣವೇ ಸ್ಥಳೀಯರು ಧಾವಿಸಿ ಜೀವನ್ಮರಣ ಸ್ಥಿತಿಯಲ್ಲಿದ್ದ ಎಂಟು ಜಾನುವಾರುಗಳಿಗೆ ನೀರು ಸುರಿದು ಉಪಚರಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಎಂಟು ಜಾನುವಾರುಗಳನ್ನು ನಗರ ಠಾಣಾಧಿಕಾರಿ ನಂದಕುಮಾರ್ ನೇತೃತ್ವದ ಪೊಲೀಸರು ವಶಪಡಿಸಿಕೊಂಡು ಬಳಿಕ ನ್ಯಾಯಾಲಯದ ಆದೇಶದಂತೆ ಫಜೀರು ಗೋವನಿತಾಶ್ರಮಕ್ಕೆ ಹಸ್ತ್ತಾಂತರಿಸಲಾಗಿದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಅಶೋಕ್ ಲೈಲಾಂಡ್ ಕಂಪೆನಿ ಹೆಸರಿನ ಎರಡು ಪಾಸರ್ೆಲ್ ಸಾಗಾಟದ ಮಿನಿ ಟೆಂಪೋದಲ್ಲಿ ಅಕ್ರಮ ಜಾನುವಾರು ಪತ್ತೆಯಾಗಿದ್ದು, ಈ ದಂಧೆಕೋರರು ಅಕ್ರಮ ಜಾನುವಾರು ಸಾಗಾಟಕ್ಕೆ ಹೊಸ ಹೊಸ ತಂತ್ರ ಹೆಣೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
—

By suddi9

Leave a Reply

Your email address will not be published. Required fields are marked *