ಮೂಡುಬಿದಿರೆ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಬಂದ್‍ಗೆ ಪೂರಕವಾಗಿ ಮೂಡುಬಿದಿರೆಯಲ್ಲಿ ಸಿಐಟಿಯು ವತಿಯಿಂದ ಮುಖ್ಯ ರಸ್ತೆಯಲ್ಲಿ ಜಾಥಾ, ಬಸ್ ನಿಲ್ದಾಣದ ಮುಖ್ಯಧ್ವಾರದ ಬಳಿ ಪ್ರತಿಭಟನೆ ನಡೆಯಿತು.

IMG_2961

IMG_2960
ಸಿಐಟಿಯು ನಾಯಕಿ ರಮಣಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಕಾರ್ಮಿಕ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ. ಕಾರ್ಮಿಕರಿಗೆ ಸೂಕ್ತವಾದ ಸೌಲಭ್ಯ ದೊರೆಯದಿದಲ್ಲಿ ಮುಂದಿನ ದಿನಗಳಲ್ಲಿ ಪಾರ್ಲಿಮೆಂಟ್ ಎದುರೇ ಪ್ರತಿಭಟನೆ ಮಾಡಲಾಗುವುದು. ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಬಂದ್‍ಗೆ ಹೆಚ್ಚಿನವರು ಬೆಂಬಲ ನೀಡುತ್ತಾರೆ. ಆದರೆ ಕೆಲವರು ಬೆಂಬಲ ನೀಡದೆ ಅಹಂಕಾರವನ್ನು ಪ್ರದರ್ಶಿಸುತ್ತಾರೆ. ಅಂತವರು ತಮ್ಮ ಕುಟುಂಬವರ್ಗದಲ್ಲಿರುವ ಕಾರ್ಮಿಕರ ಬಗ್ಗೆಯೂ ಯೋಚನೆ ಮಾಡಬೇಕು ಎಂದರು.
ಸಿಐಟಿಯು ಜಿಲ್ಲಾ ಮುಖಂಡ ಯಾದವ ಶೆಟ್ಟಿ ಮಾತನಾಡಿ, ಭರವಸೆಗಳ ಭವನ ಕಟ್ಟಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕರ ಏಳಿಗೆಗೆ ಶ್ರಮವಹಿಸುತ್ತಿಲ್ಲ. ಕಾರ್ಮಿಕ ಶ್ರಮವನ್ನು ಕಡೆಗಣಿಸಿ, ವಿದೇಶಿ ಕಂಪೆನಿಗಳಿಗೆ ಮಣೆ ಹಾಕುವ ನೀತಿಯನ್ನು ಅನುಸರಿಸುತ್ತಿದೆ. ಕಾರ್ಮಿಕ, ರೈತ ವಿರೋಧಿಗಳ ಮಸೂದೆಗಳನ್ನು ತಂದು `ಬಡ ಜನರ ಮರಣ ಶಾಸನ’ವನ್ನು ರೂಪಿಸುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕ ಮುಖಂಡರಾದ ಶಂಕರ್, ರಾಧ, ಗಿರಿಜಾ ಸಹಿತ ಮೂಡುಬಿದಿರೆ ನಗರ ಹಾಗೂ ಗ್ರಾಮಾಂತರ ಪ್ರದೇಶದ ಕಾರ್ಮಿಕರು ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *