ಬಜಪೆ:ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದಲ್ಲಿ ಶುಕ್ರವಾರದ ಜನಸಂದಣಿಯ ಮಧ್ಯೆ ಭಕ್ತರೊಬ್ಬರ ಪಿಕ್ ಪಾಕೆಟ್ ನಡೆಸಿ ಪರಾರಿಯಾಗಲೆತ್ನಿಸಿದ ಐವರನ್ನು ಬಜಪೆ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.
ಶುಕ್ರವಾರ ಭಾರತ ಬಂದ್ ನಿಮಿತ್ತ ಬಸ್ಸು ಸಂಚಾರಇಲ್ಲವಾಗಿದ್ದರು. ಸೋಣ ಶುಕ್ರವಾರವಾದ ಕಾರಣ ಜನಸಂದಣಿಯೇನು ಕಡಿಮೆ ಇರಲಿಲ್ಲ ತಂಡವೊಂದು ಭಕ್ತರೊಬ್ಬರ ಪರ್ಸ್ ಹಾಗೂ ಮೊಬೈಲ್ ಎಗರಿಸಿ ಪರಾರಿಯಾಗಲೆತ್ನಿಸಿದ್ದು ಈ ಎಲ್ಲಾ ಘಟನೆಗಳು ದೇವಳದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಕಳವುಗೈದ ಐವರ ತಂಡದಲ್ಲಿ ನಾಲ್ವರು ಮಹಿಳೆಯರೆ ಆಗಿದ್ದು ಅವರಲ್ಲಿ ಇಬ್ಬರು ಮಹಿಳೆಯರು ದೇವಳದ ಆವರಣದಲ್ಲಿಯೇ ಸಿಕ್ಕಿ ಬಿದ್ದಿರುತ್ತಾರೆ. ಉಳಿದ ಮೂವರು ಕಲ್ಲಕುಮೇರು ಬಳಿ ಅನುಮಾನಸ್ಪದವಾಗಿ ಕಂಡು ಬಂದಾಗ ಸ್ಥಳೀಯರು ನೀಡಿದ ಮಾಹಿತಿಯಂತೆ ಬಜಪೆ ಪೋಲಿಸರು ಅವರನ್ನು ಬಂಧಿಸಿದ್ದಾರೆ. ಈ ಮಧ್ಯೆ ತಂಡದಿಂದ ಮತ್ತೊರ್ವ ಯುವತಿ ಪರಾರಿಯಾಗಿರುವುದಾಗಿ ಹೇಳಲಾಗಿದೆ ದೇವಳದ ವತಿಯಿಂದ ಆನುವಂಶಿಕ ಮೊಕ್ತೆಸರರುಗಳಾದ ವಾಸುದೇವಆಸ್ರಣ್ಣ ಹಾಗೂ ಡಾ.ರವಿಂದ್ರನಾಥ ಪೂಂಜ ಅವರುಗಳು ಪ್ರತ್ಯೇಕ ದೂರುಗಳನ್ನು ಬಜಪೆ ಠಾಣೆಗೆ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *