ಮೂಡುಬಿದಿರೆ: ಕ್ರೈಸ್ತರ ಪವಿತ್ರ ಹಬ್ಬವಾದ ತೆನೆಹಬ್ಬವನ್ನು (ಮೊಂತಿ ಫೆಸ್ತ್) ಮೂಡುಬಿದಿರೆ ನಗರದ ಕೋರ್ಪುಸ್ ಕ್ರಿಸ್ತಿ ಹಾಗೂ ಅಲಂಗಾರು ಹೋಲಿ ರೋಸರಿ ಚರ್ಚ್ನಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.
ಮೂಡುಬಿದಿರೆ ಪೇಟೆಯ ಸಮಾಜಮಂದಿರ ವಾಣಿಜ್ಯ ಸಂಕೀರ್ಣ ಎದುರು ತೆನೆಗೆ ಪೂಜೆ ಸಲ್ಲಿಸಲಾಯಿತು. ಮೂಡುಬಿದಿರೆ ಚರ್ಚ್ನ ಧರ್ಮಗುರು ರೆ.ಫಾ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮುಖ್ಯರಸ್ತೆಯಲ್ಲಿ ಸಾಗಿ ಚರ್ಚ್ನವರೆಗೆ ತೆನೆಯ ಮೆರವಣಿಗೆ ನಡೆಯಿತು.
ಅಲಂಗಾರು:
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಅಲಂಗಾರು ಚರ್ಚ್ನಲ್ಲಿ ಧರ್ಮಗುರು ರೆ.ಫಾ ಬೇಸಿಲ್ವಾಸ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ತೆನೆಹಬ್ಬ ಆಚರಿಸಲಾಯಿತು. ಚರ್ಚ್ನ ಮುಖ್ಯಧ್ವಾರದಿಂದ ಚರ್ಚ್ ಮುಂಭಾಗದವರೆಗೆ ತೆನೆ ಮೆರವಣಿಗೆ ನಡೆಯಿತು. ನೂರಾರು ಕ್ರೈಸ್ತ ಬಾಂಧವರು ತೆನೆಹಬ್ಬದಲ್ಲಿ ಪಾಲ್ಗೊಂಡರು.














