ಮೂಡುಬಿದಿರೆ: ಅಮೇರಿಕಾ ಗ್ರೇಟರ್ ಬೊಸ್ಟನ್ನ ಜೈನ ಕೇಂದ್ರದಲ್ಲಿ ಸೆ.6ರಿಂದ 16ರವೆರೆಗೆ ನಡೆಯಲಿರುವ ದಶಲಕ್ಷಣ ಪರ್ವದ ನೇತೃತ್ವವನ್ನು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ವಹಿಸಿದ್ದು, ಮಹಾಮಂಡಲ ವಿಧಾನವನ್ನು ನೆರವೇರಿಸಲಿದ್ದಾರೆ.
ವಿಶೇಷ ಪೂಜೆ, ಭಜನೆ ಬಳಿಕ ಸಂಜೆ ಮೂಡುಬಿದಿರೆ ಜೈನಮಠದ ಸ್ವಾಮೀಜಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಅಮೇರಿಕಾದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಶ್ರೀಗಳು, ಪರ್ವಗಳ ರಾಜ ದಶಲಕ್ಷಣ ಪರ್ವ. ಶ್ರವಕರು ಉತ್ತಮ ಸಧ್ವಿಚಾರವನ್ನು ಮಾಡಿಕೊಳ್ಳಲು ಈ ಪರ್ವ ಸುಸಂದರ್ಭ. 300 ಕುಟುಂಬಗಳು ಈ ವಿಶೇಷ ಪರ್ವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿ, ಅಮೇರಿಕದ ಜೈನ ಕೇಂದ್ರದಲ್ಲಿ 2009ರಲ್ಲಿ ಒಂದು ವಾರದ ಆರಾಧನೆ ಪೂಜೆ ನೆರವೇರಿಸಿದ್ದನ್ನು ಸ್ವಾಮೀಜಿ ನೆನಪಿಸಿಕೊಂಡರು.
