ಪರಿಸರ ನಾಶದ ಬಗ್ಗೆ ವಿಶೇಷ ಕಾಳಜಿಯಿಂದ ಗಿಡನೆಟ್ಟು ಪೋಷಿಸುವ ಕಾರ್ಯ ಅಭಿನಂದನಿಯ ಎಂದು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು ಅವರು ಉದ್ಯಮಿ ಸಮಾಜ ಸೇವಕ ನಲ್ಯಗುತ್ತು ಪ್ರಕಾಶ್ ಶೆಟ್ಟಿ ಅವರ ಮದುವೆಯ ಬೆಳ್ಳಿ ಹಬ್ಬದ ಸಂಬ್ರಮದ ಪ್ರಯುಕ್ತ ಪಕ್ಷಿಕೆರೆ ಸಮೀಪದ ಪಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಪ್ರಕಾಶ್ ಶೆಟ್ಟಿಯವರು ಸಮಾಜಿಕ ಕಳಕಳಿಯನ್ನು ಹೊಂದಿದವರು, ಕೇವಲ ತಮ್ಮ ಉದ್ಯಮದಲ್ಲಿ ಮಾತ್ರ ತೊಡಗಿಕೊಳ್ಳದೆ ಸಮಾಜ ಸೇವೆಯಲ್ಲೂ ತೊಡಗಿಕೊಂಡದ್ದು ಅಭಿನಂದನೀಯ ಎಂದರು. ಬಾಲ್ಯದ ದಿನಗಳಲ್ಲಿ ಪರಿಸರದ ಮದ್ಯೆ ಬೆಳೆದವನು ಇಂದಿನ ದಿನದಲ್ಲಿ ಪರಿಸರ ನಾಶವಾಗುತ್ತಿದೆ ಪ್ರತಿಯೊಬ್ಬರು ಗಿಡ ನೆಟ್ಟು ಪೋಷಿಸಿದರೆ ಉತ್ತಮ ಎಂದು ಪ್ರಕಶ್ ಶೆಟ್ಟಿ ನಲ್ಯ ಗುತ್ತು ಹೇಳಿದರು.
ಸತೀಶ್ ಶೆಟ್ಟಿ ನಲ್ಯಗುತ್ತು ಪ್ರಸ್ತವನೆಗೈದರು, ಪಂಜದಿಂದ ಕೆಮ್ರಾಲ್ ಶಾಲೆವರೆಗೆ ರಸ್ತೆ ಬದಿ ಸುಮಾರು ಎರಡು ಕಿಲೋಮೀಟರ್ ವರೆಗೆ 150 ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಶಿಬರೂರು ಪಡುಮನೆ ಸದಾನಂದ ಶೆಟ್ಟಿ, ಕಾಪೆರ್Çರೇಶನ್ ಬ್ಯಾಂಕ್ ಪ್ರಬಂಧಕ ಪ್ರವೀಣ್ ಉಳ್ಳಾಲ್, ಅರಸು ಕುಂಜಿರಾಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಶೆಟ್ಟಿ, ಉದ್ಯಮಿ ಧನಂಜಯ ಶೆಟ್ಟಿಗಾರ್, ಸೀತಾರಾಮ, ಸುಧಾಕರ ಪೂಂಜ, ಶಾಲಾ ಮುಖ್ಯ ಶಿಕ್ಷಕಿ ಐರಿನ್ ಡಿಸೋಜ, ಪ್ರೌಡ ಶಾಲಾ ಮುಖ್ಯ ಶಿಕ್ಷಕಿ ಸಂದ್ಯಾ ಹೆಗ್ಡೆ ಕೆಮ್ರಾಲ್ ಪಂಚಾಯತ್ ಸದಸ್ಯರಾದ ಸುರೇಶ್ ಪಂಜ, ಕುಮಾರಿ ಆಶಾ , ಶ್ರೀಮತಿ ಸುಮತಿ ಮತ್ತಿತರರು ಇದ್ದರು.