ಹಿರಿಯ ನಾಗರಿಕರಿಗೆ ಗುರುತು ಚೀಟಿ ದಾಖಲೀಕರಣ ಕಾರ್ಯಕ್ರಮ
ಮೂಡುಬಿದಿರೆ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಐದು ದಿನಗಳು ನಡೆದ ಮೂಡುಬಿದಿರೆ 53ನೇ ಗಣೇಶೋತ್ಸವವು ಶುಕ್ರವಾರ ಸಂಪನ್ನಗೊಂಡಿತ್ತು.
ಮೂಡುಬಿದಿರೆ ಕೋ-ಅಪರೇಟಿವ್ ಸರ್ವಿಸ್ ಬ್ಯಾಂಕ್ ಹಾಗೂ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ, ಮಂಗಳೂರು ಹಿರಿಯ ನಾಗರಿಕ ಸಂಘ ಸಹಕಾರದೊಂದಿಗೆ ಹಿರಿಯ ನಾಗರಿಕರಿಗೆ ಗುರುತು ಚೀಟಿ ದಾಖಲೀಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗುರುತುಚೀಟಿ ದಾಖಲೀಕರಣ ಪತ್ರಕ್ಕೆ ಸಹಿ ಹಾಕುವುದರ ಮುಖಾಂತರ ಕಾರ್ಯಕ್ರಮವನ್ನು ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಚಾಲನೆ ನೀಡಿದರು. ಧಾರ್ಮಿಕ ಉತ್ಸವವಾದ ಗಣೇಶೋತ್ಸವವನ್ನು ಸಮಾಜದ ಸಮಸ್ತರನ್ನು ಒಗ್ಗೂಡಿಸುವ ಮೂಲ ಉದ್ದೇಶದಂತೆ, ಮೂಡುಬಿದಿರೆ ಗಣೇಶೋತ್ಸವ ಸಮಿತಿಯು ಹಲವಾರು ಯೋಜನೆಗಳ ಮೂಲಕ ಸಮಾಜಮುಖಿ ಉತ್ಸವವನ್ನಾಗಿ ಮಾಡಿದೆ. ಸಮಿತಿಗೆ ಸಮರ್ಥವಾಗಿ ಸಾಥ್ ನೀಡುತ್ತಿರುವ ಎಂಸಿಎಸ್ ಬ್ಯಾಂಕ್‍ನ ತಂಡದ ಶ್ರಮವು ಕೂಡ ಶ್ಲಾಘನೀಯ. ಸಮಿತಿಯ ಹಾಗೂ ಎಂಸಿಎಂ ಬ್ಯಾಂಕ್‍ನ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಅವರ ಸಮರ್ಥ ಮುಂದಾಳತ್ವವು ಗಣೇಶೋತ್ಸವವನ್ನು ಮಾದರಿಯನ್ನಾಗಿಸಿದೆ ಎಂದರು.
ಮೂಡುಬಿದಿರೆ ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಗಣೇಶೋತ್ಸವದ ಸಂಭ್ರಮದೊಂದಿಗೆ ನಮ್ಮಲ್ಲಿರುವ ಕೆಟ್ಟು ವಿಷಯಗಳನ್ನು ದೂರ ಮಾಡುವ ಸಂದೇಶವನ್ನು ನಮ್ಮೊಳಗೆ ನಾವು ಸಾರಬೇಕು.

ನೈಜ್ಯ ಭಕ್ತಿ, ಭಗವಂತ ಎಲ್ಲಡೆ ಇದ್ದಾನೆ ಎನ್ನುವ ಭೀತಿ ನಮ್ಮನ್ನು ನಿಗ್ರಹಿಸುತ್ತದೆ. ಭಗವಂತನ ಸ್ಮರಣೆ ನಮ್ಮನ್ನು ನೀತಿವಂತರನ್ನಾಗಿಸುತ್ತದೆ ಎಂದರು.
ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಮೂಡುಬಿದಿರೆ ಕೋ-ಅಪರೇಟಿವ್ ಸರ್ವಿಸ್ ಬ್ಯಾಂಕ್‍ನ ಸಿಇಒ ಚಂದ್ರಶೇಖರ ಎಂ., ಮಂಗಳೂರು ಹಿರಿಯ ನಾಗರಿಕ ಸಂಘದ ಕಾರ್ಯದರ್ಶಿ ಕೆ.ರಮೇಶ್ ರಾವ್, ಜೊತೆ ಕಾರ್ಯದರ್ಶಿ ಪೀಟರ್ ರಾಡ್ರಿಗಸ್, ಉದ್ಯಮಿ ಕೆ.ಶ್ರೀಪತಿ ಭಟ್, ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ ವೇದಿಕೆಯಲ್ಲಿದ್ದರು.
ನಿವೃತ್ತ ಶಿಕ್ಷಕ ಗೋವರ್ಧನ ಹೊಸಮನಿ ಹಿರಿಯರಿಗೆ ಗುರುತು ಚೀಟಿ ಮಹತ್ವದ ಕುರಿತು ಮಾತನಾಡಿದರು.
ಸಾಂಸ್ಕøತಿಕ, ಕ್ರೀಡಾ ಸ್ಪರ್ಧೆಯಲ್ಲಿ ವಿಚೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇಬ್ಬರು ಫಲಾನುಭವಿಗಳಿಗೆ ತಲಾ 10 ಸಾವಿರದಂತೆ ಸಮಿತಿಯ ವತಿಯಿಂದ ಸಹಾಯಧನ ಹಸ್ತಾಂತರಿಸಲಾಯಿತು.
ಸಮಿತಿಯ ಉಪಾಧ್ಯಕ್ಷ ಕೃಷ್ಣರಾಜ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಚಾಲಕ ರಾಜಾರಾಂ ಕಾರ್ಯಕ್ರಮ ನಿರೂಪಿಸಿದರು.