ಮೂಡುಬಿದಿರೆ: ಸಾಮಾಜಿಕ ಜಾಲತಾಣದಲ್ಲಿ ಕಟೀಲು ಶ್ರೀದೇವಿಯ ಬಗ್ಗೆ ಅವಹೇಳನಕಾರಿಯಾಗಿ ವಿಷಯಗಳನ್ನು ಪ್ರಕಟಿಸಸಿರುವುದರ ವಿರುದ್ಧ ಕಟೀಲು ಶ್ರೀದುರ್ಗಾ ಪರಮೇಶ್ವರಿ ಭಕ್ತ ವೃಂದ ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ಶುಕ್ರವಾರ ನಡೆಯಿತು.

ಮೂಡುಬಿದಿರೆ ಸಮಾಜಮಂದಿರದಲ್ಲಿ ಶ್ರೀಗಣೇಶೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಕಟೀಲಿನವರೆಗೆ ಸುಮಾರು 500ರಷ್ಟು ಭಕ್ತರು ಪಾದಾಯಾತ್ರೆಯಲ್ಲಿ ಪಾಲ್ಗೊಂಡರು.
ಉದ್ಯಮಿ ಕೆ.ಶ್ರೀಪತಿ ಭಟ್ ಪಾದಯಾತ್ರೆಯ ಕುರಿತು ಮಾತನಾಡಿ, ಫೇಸ್ಬುಕ್, ವಾಟ್ಸ್ಅಪ್ ಗಳಲ್ಲಿ ಶ್ರೀದೇವಿ ನಿಂದಿಸಿರುವುದು ಖಂಡನೀಯ. ಸಾಮಾಜಿಕ ಶಾಂತಿ ಕದಡುವ ಇಂತಹ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.
ಜಿ.ಪಂ ಮಾಜಿ ಸದಸ್ಯ ಈಶ್ವರ ಕಟೀಲು, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಪ್ರಸಾದ್, ನಾಗಾರಾಜ್ ಪೂಜಾರಿ, ಬಾಹುಬಲಿ ಪ್ರಸಾದ್, ಜಾಥಾದ ಸಂಯೋಜಕರಾದ ಗೋಪಾಲ ಶೆಟ್ಟಿಗಾರ, ಉಮೇಶ್ ಹೊಸಬೆಟ್ಟು, ಅಜಯ್ ರೈ, ಪ್ರಮುಖರಾದ ಮೇಘನಾದ್ ಶೆಟ್ಟಿ, ಸುದರ್ಶನ್, ವಿವೇಕಾನಂದ ಕಾಮತ್, ಶ್ಯಾಮ್ ಹೆಗ್ಡೆ, ಶಶಿಧರ್ ಅಂಚನ್, ಸೋಮನಾಥ ಕೋಟ್ಯಾನ್, ಅಭಿಲಾಶ್ ಶೆಟ್ಟಿ ಮೊದಲಾದವರಿದ್ದರು.
