ಬಂಟ್ವಾಳ; ವಿಶ್ವಕರ್ಮ ಸಮಾಜ ಸೇವಾ ಸಂಘ ಜೋಡುಮಾರ್ಗ, ವಿಶ್ವಜ್ಯೋತಿ ಮಹಿಳಾ ಮಂಡಳಿ ಜೋಡುಮಾರ್ಗ ಇವರ ಆಶ್ರಯದಲ್ಲಿ ವಿಶ್ವಕರ್ಮ ಪೂಜಾಮಹೋತ್ಸವದ ಪೂರ್ವಭಾವಿ `ಕ್ರೀಡೋತ್ಸವ`ವು ಇತ್ತೀಚೆಗೆ ಬಂಟ್ವಾಳ ಎಸ್‍ವಿಎಸ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.

img-20160909-wa0069ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮ ಸಮಾಜದಲ್ಲಿರುವ ಯುವ ಹಾಗೂ ಎಳೆಯ ಕ್ರೀಡಾಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತೀವರ್ಷ ಕ್ರೀಡಾಕೂಟ ಆಯೋಜಿಸುತ್ತಿರುವುದಾಗಿ ತಿಳಿಸಿದರು. ವೇದಿಕೆಯಲ್ಲಿಕೆನರಾ ಇಂಜಿನಿಯರಿಂಗ ಕಾಲೇಜು ಉಪನ್ಯಾಸಕ ಸದಾಶಿವ ಆಚಾರ್ಯ ಯಶೋಧರ ಆಚಾರ್ಯ ಪೂಪಾಡಿಕಟ್ಟೆ, ಪುರುಷೋತ್ತಮ ಆಚಾರ್ಯ ಮೇರಮಜಲು, ಸುಂದರ್, ಜಯಪ್ರಕಾಶ ಆಚಾರ್ಯ ಭಂಡಾರಿಬೆಟ್ಟು ವಿಶ್ವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಗೀತಾ ರಮೇಶ್ ಕಲ್ಲಡ್ಕ , ಶೋಭಾ ವಿಶ್ವನಾಥ ಆಚಾರ್ಯ, ವಿದ್ಯಾರತ್ನಾಕರ ಆಚಾರ್ಯ ಉಪಸ್ಥಿತರಿದ್ದರು. ಸಂಘದ ಕ್ರೀಡಾಕಾರ್ಯದರ್ಶಿ ಚಂದ್ರಶೇಖರ ಆಚಾರ್ಯ ಪೂಂಜರಕೋಡಿ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ ಬಿ.ಆಚಾರ್ಯ ವಂದಿಸಿದರು. ಕೋಶಾದಿಕಾರಿ ಜಯಚಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *