ಬಜಪೆ:ಬದುಕಿನಲ್ಲಿ ಶಿಸ್ತು ರೂಢಿಸಿಕೊಳ್ಳಲು ಕ್ರೀಡೆ ಪೂರಕ ಕೇವಲ ನಗರಕ್ಕೆ ಸೀಮಿತಗೊಂಡಿದ್ದ ವಿಶ್ವದ ಅತೀ ಹೆಚ್ಚು ದೇಶಗಳಲ್ಲಿ ಆಡುವ ಫುಟ್ಬಾಲ್ ಕ್ರೀಡೆ ಬಗ್ಗೆ ಈಗ ಗ್ರಾಮೀಣ ಪ್ರದೇಶದಲ್ಲೂ ಒಲವು ಮೂಡಿದೆ. ಆದರೆ ಇಲಾಖೆಗಳು ನೀಡುವ ಪೋತ್ಸಾಹ, ಅನುದಾನ ಏನೇನೂ ಸಾಲದು ಕ್ರೀಡೆ ಸಾಧನೆಗೆ ಶ್ರದ್ಧೆ ಹಾಗೂ ಪ್ರಯತ್ನ ಮುಖ್ಯ ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಫೆಡರೇಶನ್ ಉಪಾಧ್ಯಕ್ಷ ವಿಜಯ ಸುವರ್ಣ ಹೇಳಿದರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಕಾರಿಗಳ ಕಛೇರಿ ಹಾಗೂ ಬಜಪೆ ಸೈಂಟ್ ಜೋಸೆಫ್ ಪಿಯು ಕಾಲೇಜಿನ ಆಶ್ರಯದಲ್ಲಿ ಬಜಪೆಯ ಸೈಂಟ್ ಜೋಸೆಫ್ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಫುಟ್ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
“ಸೈಂಟ್ ಜೋಸೆಫ್ ಶಾಲೆಯ ಏಳು ಮಂದಿ ವಿದ್ಯಾರ್ಥಿಗಳು ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ರಾಜ್ಯ ತಂಡವನ್ನು ಪ್ರತಿನಿಸಿರುವುದು ಅತ್ಯಂತ ಅಭಿನಂದನೀಯ” ಎಂದು ಅವರು ಹೇಳಿದರು.
ರೊಸಾರಿಯೋ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕರಿಯಪ್ಪ ಮಾದರಿ ಫ್ರೌಢಶಾಲೆ ಕಾಟಿಪಾಳ್ಳ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ಕಾಲೇಜಿನ ಸಂಚಾಲಕ ಬ್ರದರ್ ಲೆನ್ ನೊರೊನ್ನಾ, ತಾಯಂದಿರ ಸಂಘದ ಅಧ್ಯಕ್ಷೆ ಲೋನಾ ಸೆರಾವೋ, ಕಾಲೇಜಿನ ಪ್ರಿನ್ಸಿಪಾಲ್ ಬ್ರದರ್ ಹೆಕ್ಟರ್ ಪಿಂಟೋ, ಪ್ರೌಢಶಾಲಾ ಮುಖ್ಯ ಶಿಕ್ಷಕ ಅಲ್ವಿನ್ ನೊರೊನ್ನಾ ದೈಹಿಕ ಶಿಕ್ಷಣ ಸಂತೋಷ್ ಮಸ್ಕರೇಸನ್ ಮುಂತಾದವರು ಉಪಸ್ಥಿತರಿದ್ದರು. ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

