ಬಜಪೆ: ಕಟೀಲು ದುರ್ಗಾಪರಮೇಶ್ವರಿ ದೇವಿಯನ್ನು ಮತ್ತು ಹಿಂದೂ ದೇವತೆಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ವಿರೋಧಿಸಿ, ಕಟೀಲಿನ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು  ಪೋಷಕರ ಸಹಿ ಸಂಗ್ರಹಿಸಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಯಿತು. ಸಮಾಜದ ಸ್ವಾಸ್ಥ್ಯ ಕೆಡಿಸುವವರನ್ನು ಶೀಘ್ರವೇ ಪತ್ತೆಹಚ್ಚಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.10kateelu-manavi

ಈ ಸಂದರ್ಭ ಬಿಜೆಪಿ ಮುಲ್ಕಿ ಮೂಡಬಿದ್ರೆ ಮಂಡಲದ ಅಧ್ಯಕ್ಷ ಮುಖಂಡ ಈಶ್ವರ ಕಟೀಲು, ಯುವ ಮೋರ್ಚದ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಜಗದೀಶ್ ಬಜ್ಪೆ, ಉಪನ್ಯಾಸಕರಾದ ಕೇಶವ ಹೆಗ್ಡೆ,  ಡಾ.ಸೋಂದಾ ಭಾಸ್ಕರ ಭಟ್, ಡಾ.ಕೇಶವ,  ಶ್ರೀವತ್ಸ, ವಿದ್ಯಾರ್ಥಿ ಪ್ರಮುಖರಾದ ರಾಘವೇಂದ್ರ ಭಟ್, ಪ್ರವೀಣ್ ಕುಮಾರ್, ಕು.ತೇಜಸ್ವೀನಿ, ಕು. ಯಶ್ವಿತ ಲೋಹಿತ್ ಮತ್ತಿತರರು ಇದ್ದರು.

 

By suddi9

Leave a Reply

Your email address will not be published. Required fields are marked *