ಬಂಟ್ವಾಳ: ಹಿಂದೂ ರುದ್ರಭೂಮಿಯನ್ನು ದೇವಭೂಮಿ ಎನ್ನುವ ಪರಿಕಲ್ಪನೆಯಡಿ ಅಭಿವೃದ್ದಿ ಪಡಿಸಿ ಶವ ದಹನಕ್ಕೆ ಇಲ್ಲಿಗೆ ಬರುವ ನೊಂದವರನ್ನು ಸಾಂತ್ವನಪಡಿಸುವ ನಿಟ್ಟಿನಲ್ಲಿ ಶಿವನ ಪ್ರತಿಮೆಯನ್ನು ಇಲ್ಲಿ ನಿರ್ಮಿಸಿ, ಮರಗಿಡಗಳನ್ನು ನೆಡುವುದು ಅರ್ಥಪೂರ್ಣ ಎಂದು ಜಿ.ಪಂ.ಸದಸ್ಯೆ ಮೀನಾಕ್ಷಿ ಶಾಂತಿಗೋಡು ಹೇಳಿದರು. ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿ ಸಜೀಪನಡು ಇದರ ವತಿಯಿಂದ ಸಜೀಪನಡು ಹಿಂದೂ ರುದ್ರಭೂಮಿಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದು ರುದ್ರಭೂಮಿಯ ಸುತ್ತಮುತ್ತ ತಂಪು ನೀಡುವ ಮರಗಳಿದ್ದರೆ ಇನ್ನೂ ಆಹ್ಲಾದದಾಯಕ. ಆದಷ್ಟು ಬೇಗ ಇಲ್ಲಿ ನಿರ್ಮಾಣಗೊಳಿಸಲು ಉದ್ದೇಶಿರುವ ಅಭಿವೃದ್ದಿ ಕಾರ್ಯಗಳು ಪೂರ್ಣಗಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.
ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ ನೀರಿನ ಪಂಪನ್ನು ಉದ್ಘಾಟಿಸಿ ಮಾತನಾಡಿ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಈ ರುದ್ರಭೂಮಿ ಕೈಲಾಸ ಪರ್ವತವನ್ನು ನೆನಪಿಸುತ್ತದೆ. ಇಲ್ಲಿನ ಅಭಿವೃದ್ದಿ ಕಾರ್ಯಗಳಿಗೆ ಜಿ.ಪಂ.ನಿಂದ ಅನುದಾನವನ್ನು ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ತ್ರಿಶೂಲ ಸ್ಥಂಭಕ್ಕೆ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಹರಿಶ್ಚಂದ್ರನ ಮೂರ್ತಿಗೆ ಶಿಲಾನ್ಯಾಸ ನೆರವೇರಿಸಿದರು, ಇರಾ ಗ್ರಾ,ಪಂ.ಸದಸ್ಯ ಕೆ.ಟಿ.ಸುಧಾಕರ್ ಪ್ರವೇಶ ದ್ವಾರಕ್ಕೆ ಶಿಲಾನ್ಯಾಸಗೈದರು, ಶ್ರೀನಿವಾಸ್ ಭಟ್ ಶಿವನ ಪ್ರತಿಮೆಗೆ ಶಿಲಾನ್ಯಾಸ ಮಾಡಿದರು.ತಾ.ಪಂ.ಸದಸ್ಯೆ ಸವಿತ ಹೇಮಂತ ಕರ್ಕೇರಾ, ಸಜೀಪನಡು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ನಾಸೀರ್ ಪ್ರಮುಖರಾದ ಬರ್ಕೆಗುತ್ತು ಮಹಾಬಲ ರೈ, ಮುನೀರ್, ದೇವದಾಸ ಅಡಪ, ರಾಮಣ್ಣ ಚಟ್ಟೆಕಲ್ಲು, ಉದ್ಯಮಿ ಸಂದೀಪ್ ಹಾಜರಿದ್ದರು. ಸಮಿತಿಯ ಅಧ್ಯಕ್ಷ ಯಶವಂತ ದೇರಾಜೆ ಸ್ವಾಗತಿಸಿ ಪ್ರಸ್ತಾವಿಸಿದರು, ಪ್ರಮೋದ್ ಸಾಣದ ಮನೆ ವಂದಿಸಿದರು.
