ಬಂಟ್ವಾಳ: ಅಕ್ರಮವಾಗಿ ಪರವಾಣೆಗೆ ಇಲ್ಲದೇ ಪುತ್ತೂರು ಕಡೆಯಿಂದ ಆಕೇಶಿಯಂ ಮರದ ಕಟ್ಟಿಗೆಯನ್ನು ಮಂಗಳೂರಿಗೆ ಸಾಗಾಟ ಮಾಡುತ್ತಿರುವ ವೇಳೆ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಬಂಟ್ವಾಳ ವಲಯ ಅರಣ್ಯಾ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಪ್ರಕರಣವನ್ನು ಬಂಟ್ವಾಳ ವಲಯ ಅರಣ್ಯಾ ಧಿಕಾರಿಯವರು ಪತ್ತೆ ಹಚ್ಚಿ ಕೇಸು ದಾಖಲಿಸಿದ್ದು, ಸುಮಾರು 4 ಲಕ್ಷ ಮೌಲ್ಯದ ವಾಹನ ಮತ್ತು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನ ಚಾಲಕಪುದುವೆಟ್ಟು ಗ್ರಾಮದ ಇಬ್ರಾಹಿಂ ಶಾಹಿಬ್ ಅವರನ್ನು ಬಂದಿಸಿ ಮುಚ್ಚಳಿಕೆ ಪತ್ರ ಪಡೆದು ಬಿಡುಗಡೆಗೊಳಿಸಲಾಗಿದೆ.

20btl-mara

ಕಾರ್ಯಾಚರಣೆಯಲ್ಲಿ ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ನಾಯ್ಕ ಅವರ ಮಾರ್ಗದರ್ಶನದಂತೆ , ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ.ಸುರೇಶ್ ಬಾಬು , ಉಪ ವಲಯ ಅರಣ್ಯಾಧಿಕಾರಿ ಹೆಚ್ ವಿ ರಮೇಶ್, ಅರಣ್ಯ ರಕ್ಷಕರಾದ ವಿನಯ ಕುಮಾರ್, ಜಿತೇಶ್ ಪಿ, ಚಿದಾನಂದ ಬಿ, ವಾಹನ ಚಾಲಕ ಜಯರಾಮ್, ಅರಣ್ಯ ವೀಕ್ಷಕ ಪ್ರವೀಣ್, ಭಾಸ್ಕರ್ ಡಿ ಪಾಲ್ಗೊಂಡಿದ್ದರು. ಈ ಪ್ರಕರಣದ ಮುಂದಿನ ತನಿಖೆಯನ್ನು ಮಂಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ ಹನುಮಂತಪ್ಪ ಇವರ ನಿರ್ದೇಶನದಂತೆ ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ನಾಯ್ಕ್ ಇವರಿಗೆ ವಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *