ಬಂಟ್ವಾಳ:  ಜಿಲ್ಲೆಯಲ್ಲಿ ವಿವಿಧ ಸಹಕಾರಿ ಸಂಘಗಳು ಬಡಜನರು ಸೇರಿದಂತೆ ಕೃಷಿಕರಿಗೆ ಆರ್ಥಿಕ ಸಹಾಯ ನೀಡುವುದರ ಜೊತೆಗೆ ಸರ್ಕಾರದಿಂದ ಸಿಗುವ ಬಡ್ಡಿ ವಿನಾಯಿತಿ ಸಾಲ ಮತ್ತಿತರ ಸೌಲಭ್ಯಗಳನ್ನುಸಮರ್ಪಕವಾಗಿ ತಲುಪಿಸುವ ಮೂಲಕ ರೈತರಿಗೆ ವರದಾನವಾಗಿ ಪರಿಣಮಿಸಿದೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಸಹಕಾರಿ ಸಂಘಗಳು ಸಾಲ ವಸೂಲಾತಿಯಲ್ಲಿಯೂ ಮುನ್ನಡೆ ಕಾಯ್ದುಕೊಂಡಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಟಿ. ಜಿ. ರಾಜಾರಾಮ ಭಟ್ ಹೇಳಿದ್ದಾರೆ. ತಾಲ್ಲೂಕಿನ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಮಂಗಳವಾರ ಮಧ್ಯಾಹ್ನ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಕೆ.ಶೀನ ಶೆಟ್ಟಿ ಮತ್ತು ಹಿರಿಯ ಸಿಬ್ಬಂದಿ ಕೆ.ನಾಗರಾಜ ಭಂಗ ಇವರನ್ನು ಸನ್ಮಾನಿಸಿ ಮಾತನಾಡಿದರು.

20btl-sanman

ಸಂಘದ ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಮಾವಂತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಕಾರ್ಯದಕ್ಷತೆ ಜೊತೆಗೆ ಸದಸ್ಯರ ಬೆಂಬಲದಿಂದ ಸಂಘವು ಬಲಿಷ್ಟವಾಗಿ ಬೆಳೆದಿದೆ ಎಂದರು.  ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ಸಹಕಾರಿ ಸಂಘವು ಪರಸ್ಪರ ವಿಶ್ವಾಸ ಮತ್ತು ನಂಬಿಕೆ ಜೊತೆಗೆ ಸಹಕಾರ ತತ್ವ ಮೂಲಕ ರೈತರಿಗೆ ನೆರವಾಗುತ್ತಿದೆ ಎಂದರು. ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ರಾಜಕೀಯ ರಹಿತವಾಗಿದ್ದರೆ ಸಹಕಾರಿ ಸಂಘದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಇದೇ ವೇಳೆ ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಿಸಲಾಯಿತು. ಹಿರಿಯ ಯಕ್ಷಗಾನ ಅರ್ಥದಾರಿ ಕುತ್ಲೋಡಿ ವಾಸು ಶೆಟ್ಟಿ ಮತ್ತು ಶಶಿಧರ್ ರೈ ಅರಳ ಇವರು ಅನಿಸಿಕೆ ವ್ಯಕ್ತಪಡಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಎ.ಗೋಪಿನಾಥ ರೈ, ಬಿ.ಪ್ರಪುಲ್ಲ ರೈ ಮತ್ತಿತರರು ಶುಭ ಹಾರೈಸಿದರು. ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ , ಸಂಘದ ನಿರ್ದೇಶಕರಾದ ಸತೀಶ್ ಪೂಜಾರಿ, ಗುಮ್ಮಣ್ಣ ನಾಯ್ಕ್, ಸೀತಾರಾಮ ಶೆಟ್ಟಿ, ಸದಾಶಿವ ಪೂಜಾರಿ, ರಮೇಶ್ ಎಂ. ಅರುಣಾ ಎಸ್.ಶೆಟ್ಟಿ, ಸೆಲೆಸ್ತಿನಾ ಡಿಸೋಜಾ, ವ್ಯವಸ್ಥಾಪಕಿ ಆರತಿ, ಜಿಲ್ಲಾ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ಕೇಶವ ಕಿಣಿ ಮತ್ತಿತ್ತರರು ಇದ್ದರು. ಸಂಘದ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಸ್ವಾಗತಿಸಿ, ನಿರ್ದೇಶಕ ಜಗದೀಶ ಆಳ್ವ ಅಗ್ಗೊಂಡೆ ವಂದಿಸಿದರು. ಉಪಾಧ್ಯಕ್ಷ ಪ್ರಭಾಕರ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಮಂಗಳವಾರ ಮಧ್ಯಾಹ್ನ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಕೆ. ಶೀನ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಂ. ಪದ್ಮರಾಜ ಬಲ್ಲಾಳ್, ಟಿ. ಜಿ. ರಾಜಾರಾಮ ಭಟ್, ಎಂ. ತುಂಗಪ್ಪ ಬಂಗೇರ, ಸುದರ್ಶನ ಜೈನ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *