ವಿಟ್ಲ: ಮೈಸೂರು ವಿಭಾಗೀಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವು ಅಕ್ಟೋಬರ್ 14 ಮತ್ತು 15 ರಂದು ವಿಟ್ಲ ಮಾದರಿ ಶಾಲೆಯ ಮೈದಾನದಲ್ಲಿ ಜರಗಳಿದ್ದು ಇದರ ಪೂರ್ವಭಾವಿ ಸಭೆಯು ನಡೆಯಿತು.

ಈ ಸಭೆಯಲ್ಲಿ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ದ. ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ, ಅಧ್ಯಕ್ಷರಾಗಿ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ, ಉಪಾಧ್ಯಕ್ಷರಾಗಿ ಜಿ. ಪಂ. ಸದಸ್ಯ ಎಂ. ಎಸ್ ಮಹಮ್ಮದ್ ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆರ್ಥಿಕ ಸಮಿತಿ ಅಧ್ಯಕ್ಷರಾಗಿ ಸುಬ್ರಾಯ ಪೈ, ಉಪಾಧ್ಯಕ್ಷರಾಗಿ ಎಲ್ ಎನ್ ಕೂಡೂರು, ಕಾರ್ಯದರ್ಶಿ ಪ್ರಭಾಕರ ಶೆಟ್ಟಿ, ಆಹಾರ ಸಮಿತಿ ಅಧ್ಯಕ್ಷರಾಗಿ ಅರುಣ್ ಎಂ ವಿಟ್ಲ, ಕಾರ್ಯದರ್ಶಿ ರವಿಪ್ರಕಾಶ್ ಹಾಗೂ ವಿವಿಧ ಸಮಿತಿಗಳು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

By suddi9

Leave a Reply

Your email address will not be published. Required fields are marked *