ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜಿಕಲ್ಲು, ಸ್ತ್ರೀ ಶಕ್ತಿ ಗೊಂಚಲುಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯ ಮೇಲ್ವಿಚಾರಕಿಯಾಗಿ ಮುಂಭಡ್ತಿಗೊಂಡ ಗಾಯತ್ರಿ ಕಂಬಳಿ ಇವರನ್ನು ಅಮ್ಟಾಡಿ ಗ್ರಾ.ಪಂ. ಸಭಾಂಗಣದಲ್ಲಿ ಗೌರವಿಸಲಾಯಿತು.
ಈ ಸಂದರ್ಭ ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ತಾ.ಪಂ. ಸದಸ್ಯೆ ಮಲ್ಲಿಕಾ ವಿ ಶೆಟ್ಟಿ, ಉಪಾಧ್ಯಕ್ಷೆ ಯಶೋಧ, ಗ್ರಾಮ ಕರಣಿಕ ಶಶಿಕುಮಾರ್, ಗ್ರಾ.ಪಂ. ಸದಸ್ಯರಾದ ಐರಿನ್ ಡಿ’ಸೋಜಾ, ಚಂದ್ರಾವತಿ, ರತಿ ಭಂಡಾರಿ ಮತ್ತು ಶ್ರೀಮತಿ, ಪಿಡಿಓ ರಾಜಶೇಖರ ರೈ, ಪ್ಲೇವಿ ಡಿ’ಸೋಜಾ, ವಸಂತಿ ದುರ್ಗಾನಗರ ಹಾಗೂ ಸ್ತ್ರೀ ಶಕ್ತಿ ಗೊಂಚಲುಗಳ ಸದಸ್ಯರುಗಳು ಉಪಸ್ಥಿತರಿದ್ದರು.
