ಮೂಡಬಿದ್ರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ “ಸ್ವಚ್ಚ ಭಾರತ ಶ್ರೇಷ್ಠ ಭಾರತ” ಆಂದೋಲನಾತ್ಮಕ ಪ್ರಕ್ರಿಯೆ ಸ್ವಚ್ಚತಾ ಆಂದೋಲನಾ. ಅ.2 ಗಾಂಧಿ ಜಯಂತಿ ಪ್ರಯುಕ್ತ “ಸ್ವಚ್ಚ ಮೂಡಬಿದ್ರೆ ಶ್ರೇಷ್ಠಮೂಡಬಿದ್ರೆ” ಎನ್ನುವ ಪರಿಕಲ್ಪನೆಯಡಿ ಮಾತೃಭೂಮಿ ಸೌಹಾರ್ದ ಸಹಕಾರಿ “ಸ್ವಚ್ಚ ಭಾರತ ಜಾಗೃತಿ ನಡಿಗೆ” ಕಾರ್ಯಕ್ರಮ ಹಮ್ಮಿಕೊಂಡಿತ್ತು.

swacchabharat-photos

ಮೂಡಬಿದ್ರೆಯ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ, ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಶುಭಾಶೀರ್ವಾದದ ತಮ್ಮ ಮಾತುಗಳಲ್ಲಿ, ರಾಷ್ಟ್ರ ಶ್ರೇಷ್ಠವಾದ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿಯ ಕರ್ತವ್ಯ. ಈ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದಲ್ಲಿ ಎಲ್ಲದರಲ್ಲು ಯಶಸ್ಸುಗಳಿಸಲು ಸಾದ್ಯ. ಇದಕ್ಕೆ ಉದಾಹರಣೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹಾಗೂ ಈಗಿನ ಸನ್ಮಾನ್ಯ ಪ್ರಧಾನ ಮಂತ್ರಿಗಳು.

ಸತ್ಯ ಅಹಿಂಸೆಯ ಮೂಲಕ ರಾಷ್ಟ್ರಕ್ಕೆ ಸ್ವಂತಂತ್ರ್ಯವನ್ನು ದೊರಕಿಸಿಕೊಟ್ಟ ಮಹಾನ್ ಮಾನವತಾವಾದಿ ಗಾಂಧೀಜಿಯವರ ಜನ್ಮದಿನವನ್ನು ನಾವೆಲ್ಲರೂ ಸೇರಿಕೊಂಡು ಆಚರಿಸುವುದರ ಜೊತೆಗೆ ಅವರು ಪ್ರಾಮುಖ್ಯತೆಕೊಟ್ಟಂತಹ ಸಹಕಾರಿ ಕ್ಷೇತ್ರದ ಮೂಲಕ ಈಗಿನ ಪ್ರಧಾನ ಮಂತ್ರಿಗಳು ಪ್ರಾರಂಭಿಸಿದ ಆಂದೋಲನದ ಭಾಗವಾಗಿ “ಸ್ವಚ್ಚ ಭಾರತ” ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದೀರಿ. ನಿಮ್ಮ ಈ ಕಾರ್ಯಕ್ರಮ ಮೂಡಬಿದ್ರೆ ಪರಿಸರದಲ್ಲಿ ಭಾವನಾತ್ಮಕ ರೀತಿಯಲ್ಲಿ ಸ್ವಚ್ಚತೆಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಲಿ ಎಂದರು, ಅಲ್ಲದೇ ಜನಸಾಮಾನ್ಯರಾಗಿರುವ ಪೌರ ಕಾರ್ಮಿಕರನ್ನು ಸ್ವಚ್ಚತಾ ಸೇನಾನಿಗಳೆಂದು ಅಭಿನಂದಿಸುವ ಕಾರ್ಯಕ್ರಮ ಆದರ್ಶಪ್ರಾಯವಾಗಿದ್ದು ಎಲ್ಲರ ಕರ್ತವ್ಯಕ್ಕೂ ಅದರದ್ದೆ ಆದ ಮೌಲ್ಯಗಳಿವೆ ಎಂದು ತೋರಿಸಿಕೊಡುವಲ್ಲಿ ಯಶಸ್ವಿಯಾಗಿದ್ದೀರಿ, ಈ ಎಲ್ಲಾ ಕಾರ್ಯಕ್ರಮಗಳಿಗೆ ಶ್ರೀ ದೇವರು ಯಶಸ್ಸನ್ನು ಅನುಗ್ರಹಿಸಲಿ ಎಂದು ಆಶೀರ್ವದಿಸಿದರು ಹಾಗೂ ಸ್ವಚ್ಚತಾ ಪ್ರತಿಜ್ಞೆಯನ್ನು ಭೋದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಹಕಾರಿ ನಿರ್ದೇಶಕ  ಬಿ ನಾಗರಾಜ ಶೆಟ್ಟಿ ಭಾರತ ಮಾತೆಗೆ ಪುಷ್ಪಾರ್ಚನೆಗೈದು ಸ್ವಚ್ಚ ಭಾರತ ಜಾಗೃತಿ ನಡಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು ಸ್ವಚ್ಚತೆಗೆ ಆದ್ಯತೆ ಕೊಡಬೇಕು ಈ ಮೂಲಕ ಜನರ ಆರೋಗ್ಯ ರಕ್ಷಣೆಯಾಗಬೇಕು ರಾಷ್ಟ್ರದ ಅಭಿವೃದ್ದಿಯಾಗಬೇಕು ಎನ್ನುವ ಚಿಂತನೆಯೊಂದಿಗೆ ವಿಶ್ವಮಾನ್ಯ ನರೇಂದ್ರ ಮೋದಿಯವರು ಸ್ವಚ್ಚತೆಯ ಆಂದೋಲನವನ್ನು ಪ್ರಾರಂಭಿಸಿದರು. ನಮ್ಮ ಸಹಕಾರಿಯು ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಸಹಕಾರಿ ಕ್ಷೇತ್ರವೂ ಕೂಡ ಆಂದೋಲನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ರಾಷ್ಟ್ರದ ಅಭಿವೃದ್ದಿಯಲ್ಲಿ ತಮ್ಮ ಸಹಕಾರವನ್ನು ನೀಡಬಹುದಾಗಿದೆ ಎಂಬುದಕ್ಕೆ ಉದಾಹರಣೆಯಾಗಿದೆ ಎಂದರು.

ಸ್ಥಳೀಯ ಪ್ರಮುಖರಾದ  ಕೆ.ಪಿ ಜಗದೀಶ ಅಧಿಕಾರಿ, ದೇವಿಪ್ರಸಾದ್ ಶೆಟ್ಟಿ, ಸುದರ್ಶನ ಮೂಡಬಿದ್ರೆ ಇವರು “ಸ್ವಚ್ಚ ಭಾರತ” ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿದರು. ಸ್ಥಳೀಯ ಪುರಸಭಾ ಸದಸ್ಯ ಗೋಪಾಲ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸಹಕಾರಿಯ ಅಧ್ಯಕ್ಷ ಶ್ರೀ ಭಾಸ್ಕರ್ ದೇವಸ್ಯ ಸ್ವಾಗತಿಸಿ, ಮೂಡಬಿದ್ರೆ ಶಾಖಾಧಿಕಾರಿ ಶ್ರೀ ಕೃಷ್ಣ ಮೂಲ್ಯ ವಂದಿಸಿದರು. ಸಹಕಾರಿಯ ಆಡಳಿತ ನಿರ್ದೇಶಕ ಕೃಷ್ಣ ಕೊಂಪದವು ಕಾರ್ಯಕ್ರಮ ನಿರೂಪಿಸಿದರು.

ಮೂಡಬಿದ್ರೆ ಪುರಸಭೆಯ ಪೌರಕಾರ್ಮಿಕರನ್ನು (ಸ್ವಚ್ಚತಾ ಸೇನಾನಿಗಳು) ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಮೂಡುಬಿದ್ರಿ ಪ್ರದೇಶದ ಸಾವಿರ ಕಂಬದ ಬಸದಿಯಿಂದ ಬಸ್ ನಿಲ್ದಾಣದವರೆಗೆ ಸ್ವಚ್ಚತಾ ಕಾರ್ಯದ ಜತೆಗೆ ಸ್ವಚ್ಚತಾ ಪ್ರತಿಜ್ಞೆಯ ಕರಪತ್ರವನ್ನು ಎಲ್ಲಾ ಅಂಗಡಿ, ಕಚೇರಿಗಳಿಗೆ “ಸ್ವಚ್ಚ ಭಾರತ ಜಾಗೃತಿ ನಡಿಗೆ” ಮೂಲಕ ವಿತರಿಸಲಾಯಿತು. ಈ ನಡಿಗೆಯಲ್ಲಿ ಸಹಕಾರಿಯ ಸಿಬ್ಬಂದಿಗಳು, ನಿತ್ಯನಿಧಿ ಸಂಗ್ರಹಕಾರರು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಮೂಡಬಿದ್ರೆ ಪ್ರದೇಶದ ನಾಗರಿಕ ಬಂಧುಗಳು ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *