ಮೂಡುಬಿದಿರೆ: ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಅವರ 2015-16ನೇ ಸಾಲಿನ ನಿಧಿಯಿಂದ ಮೂಡುಬಿದಿರೆ ಮೈನ್ ಶಾಲೆಯ ಅಂಗಳಕ್ಕೆ ಅಳವಡಿಸಲಾದ ರೂ. 2.45 ಲಕ್ಷದ ಇಂಟರ್‍ಲಾಕ್ ವ್ಯವಸ್ಥೆಯನ್ನು ಶುಕ್ರವಾರ ಉದ್ಘಾಟಿಸಲಾಯಿತು.

mbd_oct7_1-1

ಕ್ಯಾ.ಗಣೇಶ್ ಕಾರ್ಣಿಕ್ ಇಂಟರ್‍ಲಾಕ್ ಹಾಗೂ ವಿಶ್ವ ಕೈತೊಳೆಯುವ ದಿನಾಚರಣೆಯನ್ನು ಉದ್ಘಾಟಿಸಿದರು. ಪೋಷಕರಿಗೆ ಹಾಗೂ ಶಿಕ್ಷಕರಿಗೆ ಶಾಲೆಯ ಬಗ್ಗೆ ಪ್ರೀತಿ, ಕಾಳಜಿಯಿದ್ದಾಗ ಸರ್ಕಾರಿ ಶಾಲೆಗೆ ಜನಪ್ರತಿನಿಧಿಗಳಿಂದ ಸವಲತ್ತುಗಳನ್ನು ತರಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಬೆಳಗಿಸುವಂತಹ ಕೆಲಸ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಿಂದಾಗುತ್ತಿದೆ ಎಂದರು.

ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಮೂಡುಬಿದಿರೆ ಪುರಸಭಾ ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ. ಸದಸ್ಯ ಲಕ್ಷ್ಮಣ್ ಪೂಜಾರಿ, ಎಸ್‍ಡಿಎಂಸಿ ಅಧ್ಯಕ್ಷ ಸುಧೀಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ, ವಿಷಯ ಪರಿವೀಕ್ಷಣಾಧಿಕಾರಿ ಶಂಕರಪ್ಪ ಮುದ್ನಾಳ್, ರಾಜೇಶ್ ಮಲ್ಯ, ವಕೀಲ ಕೆ.ಆರ್ ಪಂಡಿತ್, ಕ್ಷೇತ್ರ ಸಮನ್ವಯಾಧಿಕಾರಿ ರಮೇಶ್ ಆಚಾರ್ಯ, ಜಿಲ್ಲಾ ಹಿಂದುಳಿದ ವರ್ಗ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಸುಂದರ್ ಪೂಜಾರಿ, ಶ್ರೀ ಹನುಮಂತ ಹಾಗೂ ಶ್ರೀ ವೆಂಕಟರಮಣ ದೇವಸ್ಥಾನಗಳ ಕೋಶಾಧಿಕಾರಿ ಶಿವಾನಂದ ಪ್ರಭು ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮೇಲ್ವಿಚಾರಕಿ ರೂಪಾ ಕಿಣಿ, ಪ್ರಭಾರ ಮುಖ್ಯ ಶಿಕ್ಷಕಿ ರೋಹಿಣಿ ಪ್ಲಾವಿಯ ಮರಿನಾ ಡಿ’ಸೋಜಾ ಸ್ವಾಗತಿಸಿದರು. ಸತ್ಯವತಿ ಕಾರ್ಯಕ್ರಮ ನಿರೂಪಿಸಿದರು. ಜೆಸಿಂತಾ ವಂದಿಸಿದರು.

By suddi9

Leave a Reply

Your email address will not be published. Required fields are marked *