ಉಳ್ಳಾಲ:ಜನನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಮತ್ತು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಲಾರ್ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭ ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಫಿರೋಝ್ ಮಲಾರ್ ಮಾತನಾಡಿ ಎಲ್ಲಾ ಧರ್ಮದಲ್ಲಿ ಸ್ವಚ್ಛತೆಗೆ ಮಹತ್ವವನ್ನು ನೀಡಿದೆ.ಪ್ರತಿಯೊಂದು ದೇವರನ್ನು ಪೂಜಿಸುವ ಮೊದಲು ಕೈ ತೊಳೆದು ಸ್ವಚ್ಛಗೊಳಿಸಿ ಪೊಜಿಸುತ್ತೆವೆ. ಕೈ ತೊಳೆಯುವ ದಿನಾಚರಣೆಯನ್ನು ಯಾರು ಕಡೆಗಣಿಸಬೇಡಿ ಎಂದು ಕರೆ ನೀಡಿದರು. ನಂತರ ಜನನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷೆ ಗೀತ .ಕೆ.ಉಚ್ಚಿಲ ಮಾತನಾಡಿ ಸ್ವಚ್ಚತೆ ಮಕ್ಕಳಿಂದ ಪ್ರಾರಂಭವಾದರೆ ಮಾತ್ರ ಸವಚ್ಚತೆಯನ್ನು ಕಾಪಾಡಲು ಸಾಧ್ಯ ಎಂದು ಹೇಳಿದರು.
ಮಲಾರ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಳ ಎಸ್, ಜನನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ನ ಉಪಾಧ್ಯಕ್ಷೆ ಶರ್ಮಿಳ ದಿಲೀಪ್, ಎಸ್ಡಿಎಂಸಿ ಸದಸ್ಯ ಅಬ್ದುಲ್ ಮಜೀದ್ ಈ ಸಂದರ್ಭ ಉಪಸ್ಥಿತರಿದರು.