ಮೂಡುಬಿದಿರೆ: ಕೋಟಿ ಚೆನ್ನಯ(ಹಳೆಯ ಚಲನಚಿತ್ರ) ಕೋಟಿ ಪಾತ್ರಧಾರಿ, ಸಮಾಜ ಸೇವಕ, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಮೂಡುಬಿದಿರೆ ಕಲ್ಲಮುಂಡ್ಕೂರಿನ ಮಾಲ್ದಬೆಟ್ಟುಗುತ್ತು ಸುಭಾಶ್ಚಂದ್ರ ಪಡಿವಾಳ್( 75) ಸೆ.17ರಂದು ರಾತ್ರಿ ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೋಟಿ ಚೆನ್ನಯ, “ಯೇರ್ ಮಲ್ತಿನ ತಪ್ಪು” ಸಹಿತ ತುಳು ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದರಾಗಿ ಬಣ್ಣ ಹಚ್ಚಿದ್ದಾರೆ.
ಸುಬಾಶ್ಚಂದ್ರ ಪಡಿವಾಳ್ ಅವರಿಗೆ ಪತ್ನಿ, ಮಗ ಹಾಗೂ ಮಗಳು ಇದ್ದಾರೆ. ಸರಳ ಹಾಗೂ ಸಜ್ಜನಿಕೆಯಿಂದ ಗುರುತಿಸಿಕೊಂಡಿ ಪಡಿವಾಳರ ಸೌಮ್ಯಯುತ ಮಾತು, ದಾನ ಹಾಗೂ ಸಮಾಜಸೇವೆಯಲ್ಲಿ ಮೂಡಿಸಿದ ಛಾಪು ಅವಿಸ್ಮರಣೀಯ.
ದೈಲಬೆಟ್ಟು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾಗಿದ್ದ ಪಡಿವಾಳರು ಕಲ್ಲಮುಂಡ್ಕೂರು ಸರ್ವೋದಯ ಶಾಲೆಯ ಸಂಚಾಲಕರಾಗಿದ್ದರು. ಕಲ್ಲಮುಂಡ್ಕೂರು ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ಮಂಗಳೂರು ಎಪಿಎಂಸಿಯ ಮಾಜಿ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದು, ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿದ್ದಾರೆ.
