ಮೂಡುಬಿದಿರೆ : ರಾಜೀವ್‍ಗಾಂಧಿ ಆರೋಗ್ಯ ವಿ.ವಿ.ಬೆಂಗಳೂರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.28ರಂದು ಮೂಡುಬಿದಿರೆಯಲ್ಲಿ ಅಖಿಲ ಭಾರತ ಅಂತರ್ ವಿ.ವಿ.ಪುರುಷರ ಹಾಗೂ ಮಹಿಳೆಯರ ವಿಭಾಗದ ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

img_5060

ಮಂಗಳವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತೀಯ ವಿ.ವಿಗಳ ನಿರ್ದೇಶನದಲ್ಲಿ ನಡೆಯಲಿರುವ ಈ ಚಾಂಪಿಯನ್‍ಶಿಪ್‍ನಲ್ಲಿ ರಾಷ್ಟ್ರದ ಸುಮಾರು 180 ವಿ.ವಿಗಳಿಂದ ಒಟ್ಟು 3000 ಮಂದಿ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ ಈ ಎಲ್ಲಾ ವಿ.ವಿಗಳು ತಮ್ಮ ಅಧಿಕೃತ ಪ್ರವೇಶವನ್ನು ಖಾತರಿಪಡಿಸಿದ್ದಾರೆ ಎಂದು ಹೇಳಿದರು.

ಪುರುಷರ ವಿಭಾಗದಲ್ಲಿ 12 ಕಿ.ಮೀ ಹಾಗೂ ಮಹಿಳೆಯರ 6ಕಿ.ಮೀ ಸ್ಪರ್ಧೆಯಿದೆ. ಮೂಡುಬಿದಿರೆಯಲ್ಲಿ ಈಗಾಗಲೇ ಸ್ಪರ್ಧೆಯ ಪಥವನ್ನು ಅಂತಿಮಗೊಳಿಸಿದ್ದು ಪೂರ್ವಸಿದ್ಧತೆ ನಡೆಯುತ್ತಿದೆ. ಕಳೆದ ಬಾರಿಯೂ ಮಂಗಳೂರು ವಿ.ವಿ ಮೂಲಕ ಈ ಚಾಂಪಿಯನ್‍ಶಿಪ್‍ನ್ನು ಮೂಡುಬಿದಿರೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.ಕಳೆದ ಬಾರಿ ಮಂಗಳೂರು ವಿ.ವಿ ಪುರುಷರ ವಿಭಾಗದಲ್ಲಿ ಚಾಂಪಿಯನ್‍ಶಿಪ್ ಪಡೆದಿದ್ದು, ಮಹಿಳಾ ವಿಭಾಗದಲ್ಲಿ ರನ್ನರ್ಸ್‍ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಮಹಿಳೆಯರ ವಿಭಾಗದಲ್ಲಿ ಪಟಿಯಾಲದ ಪಂಜಾಬ್ ವಿ.ವಿ ಚಾಂಪಿಯನ್ ಆಗಿತ್ತು. ಈ ಬಾರಿ ಮಂಗಳೂರು ವಿ.ವಿ. ಯನ್ನು ಪ್ರತಿನಿಧಿಸುವ ಮೂಲಕ ಆಳ್ವಾಸ್ ಕ್ರೀಡಾಪಟುಗಳು ಸಮಗ್ರ ಚಾಂಪಿಯನ್‍ಶಿಪ್ ಪಡೆದುಕೊಳ್ಳುವಲ್ಲಿ ಶ್ರಮಿಸಲಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ವತಿಯಿಂದ ನಗದು ಪುರಸ್ಕಾರ ನೀಡುವ ಇರಾದೆ ಇದೆ ಎಂದು ಆಳ್ವರು ಹೇಳಿದರು.

ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ರಾಜೀವ್‍ಗಾಂಧಿ ವಿ.ವಿ ಉಪಕುಲಪತಿ ಡಾ.ಕೆ.ಎಸ್ ರವೀಂದ್ರನಾಥ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹಾಗೂ ಅಂತಾರಾಷ್ಟ್ರೀಯ ಮಾಜಿ ಮತ್ತು ಹಾಲಿ ಕ್ರೀಡಾಪಟುಗಳು ಈ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

By suddi9

Leave a Reply

Your email address will not be published. Required fields are marked *