ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆಪದವು ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ಮೂರು ದಿನಗಳು ನಡೆಯಲಿರುವ ಆಳ್ವಾಸ್ ಚಿತ್ರಸಿರಿಗೆ-2016 ರಾಜ್ಯಮಟ್ಟದ ಚಿತ್ರಕಲಾ ಶಿಬಿರಕ್ಕೆ ಗುರುವಾರ ಚಾಲನೆ ನೀಡಲಾಯಿತು. ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಶಿಬಿರವನ್ನು ಉದ್ಘಾಟಿಸಿದರು.

alvas-chitrasiri5

alvas-chitrasiri2

ಬಳಿಕ ಆಶೀರ್ವಚನ ನೀಡಿದ ಅವರು, ಹೃದಯ ಶ್ರೀಮಂತಿಕೆ ಇರುವ ಮೋಹನ ಆಳ್ವರ ವ್ಯಕ್ತಿತ್ವದಿಂದಾಗಿ ಮೂಡುಬಿದಿರೆ ಸಂಸ್ಕೃತಿಯ ಕಾಶಿಯಾಗಿದೆ. ಚೇತೋಹಾರಿಯಾದ ಮನಸ್ಥಿತಿಯಿದ್ದವರು ಮಾತ್ರ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯ. ಕಲೆಯ ಬೆಳಕು ನಮ್ಮ ಮನಸ್ಸನ್ನು ಅರಳಿಸುವಂತಾಗಬೇಕು. ಜೀವನದ ವಿಭಿನ್ನವಾದ ಮಜಲುಗಳನ್ನು ದಾಟುವುದನ್ನು ಒಬ್ಬ ಚಿತ್ರ ಕಲಾವಿದ ಬಣ್ಣ ಹಾಗೂ ರೇಖೆಗಳ ಮೂಲಕ ಹೇಳುತ್ತಾನೆ. ಧರ್ಮ, ನಂಬಿಕೆಗಳಿರುವ ಕಲಾವಿದ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ. ಏಕತೆಯನ್ನು ಮೂಡಿಸುವಂತಹ ಕೆಲಸವಾದಾಗ ರಾಷ್ಟ್ರ ಸಮೃದ್ಧವಾಗಿ ಬೆಳೆಯುತ್ತದೆ. ಸಂಸ್ಕೃತಿ ಅಗಾಧವಾಗಿ ಬೆಳೆದಾಗ ಧ್ವೇಷ ದೂರವಾಗುತ್ತದೆ. ಕಲಾವಿದರು ಬಿನ್ನತೆಯನ್ನು ಸೃಷ್ಠಿಸದೆ, ಏಕತೆಯನ್ನು ಕಲೆಯ ಮೂಲಕ ಮೂಡಿಸಬೇಕು ಎಂದರು.

alvas-chitrasiri-3alvas-chitrasiri-1

ಉಡುಪಿ ಸಾಯಿರಾಧ ಗ್ರೂಪ್ಸ್ನ ಮನೋಹರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಳ್ವಾಸ್ ಬಿ.ವಿ.ಎ ವಿಭಾಗದ ವಿದ್ಯಾರ್ಥಿಗಳ ಮಾಸಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಡಾ.ಮೋಹನ ಆಳ್ವರ ವಿಭಿನ್ನ ಪ್ರಯತ್ನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪ್ರಸಿದ್ಧಿಯಾಗಬೇಕು. ಇದರಿಂದ ಮೂಡುಬಿದಿರೆ ಮಾತ್ರವಲ್ಲ, ಇಡೀ ದೇಶಿಯ ಕಲೆ, ಸಂಸ್ಕೃತಿ ಜಗಜ್ಜಾಹೀರಾಗುತ್ತದೆ ಎಂದರು.

alvas-chitrasiri4

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ ಚಿತ್ರಕಲೆಗೆ ಬೇಕಾದ ಪರಿಕರಗಳನ್ನು ಕಲಾವಿದರಿಗೆ ವಿತರಿಸಿದರು. ಚಿತ್ರವನ್ನು ನೋಡುವ ಕಣ್ಣು, ಅರ್ಥ ಮಾಡಿಕೊಳ್ಳುವ ಮನಸ್ಸಿದರೆ ಚಿತ್ರ ಸುಂದರವಾಗಿ ಕಾಣುತ್ತದೆ. 2018ರಲ್ಲಿ ವಿಶ್ವನುಡಿಸಿರಿ ವಿರಾಸತ್ ನಡೆಯಲಿಕ್ಕಿದ್ದು, ಆ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಕಲಾ ಶಿಬಿರ ನಡೆಸುವ ಚಿಂತನೆಯಿದೆ ಎಂದರು. ಶಿಬಿರ ಸಲಹಾ ಸಮಿತಿಯ ಗಣೇಶ್ ಸೋಮಯಾಜಿ ಸ್ವಾಗತಿಸಿದರು. ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *