ಮೂಡುಬಿದಿರೆ: ಮೂಡುಬಿದಿರೆ ಮೆಸ್ಕಾಂ ಕಚೇರಿಯಿಂದ ಗಂಟಾಲ್‍ಕಟ್ಟೆಯವರೆಗಿನ ರಾಜ್ಯ ಹೆದ್ದಾರಿಯನ್ನು 4.07 ಕೋಟಿ ರೂ. ವೆಚ್ಚದಲ್ಲಿ ವಿಸ್ತರಿಸಿ, ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಕೆ.ಅಭಯಚಂದ್ರ ಜೈನ್ ಗುರುವಾರ ಸಂಜೆ ಗುದ್ದಲಿಪೂಜೆ ನೆರವೇರಿಸಿದರು.alvas-2

ಬಳಿಕ ಮಾತನಾಡಿದ ಅವರು, ಮೂರು ಕಾವೇರಿ ಮೂಲ್ಕಿ ಕಾರ್ನಾಡು ಪೇಟೆಯವರೆಗಿನ ರಸ್ತೆಯನ್ನು 10ಕೋಟಿ ರೂ.ವೆಚ್ಚದಲ್ಲಿ ಕುಪ್ಪೆಪದವು ಇರುವೈಲು-ಮೂಡುಬಿದಿರೆ ರಸ್ತೆಯನ್ನು 9 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಸಹಿತ ಕ್ಷೇತ್ರ ವ್ಯಾಪ್ತಿಯ ಹಲವು ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಶ್ರವಣ ಬೆಳಗೋಳ ಮಹಾಮಸ್ತಕಾಭಿಷೇಕ ವಿಶೇಷ ಅನುದಾನದ ಮೂಲಕ ಮಹಾವೀರ ಕಾಲೇಜು ರಸ್ತೆಯನ್ನು 10ಮೀ ಅಗಲಗೊಳಿಸಿ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾದ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರೇಮನಾಥ್ ಮಾರ್ಲ, ಸುರೇಶ್ ಪ್ರಭು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‍ಗಳಾದ ರವಿಕುಮಾರ್, ರಾಘವೇಂದ್ರ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *