ಬಂಟ್ವಾಳ : ಎಸ್.ಕೆ.ಪಿ.ಎ ಬಂಟ್ವಾಳ ತಾಲೂಕು ವಲಯದ ಸಹಯೋಗದಲ್ಲಿ ಪ್ರಗತಿ ಪರ ಕೃಷಿಕರಾದ ರಾಜೇಶ್ ನಾಯ್ಕರವರು ಮಜಿ ವೀರಕಂಭ ಸರಕಾರಿ ಪ್ರಾಥಮಿಕ ಶಾಲೆಯ ನಲಿಕಲಿ ತರಗತಿಗೆ ತನ್ಮೂಲಕ ನೀಡಿದ ಟೈಲ್ಸ್ ಹಾಗೂ ಕೃಷಿ ಚಟುವಟಿಕೆ ವೀಕ್ಷಿಸಿ ವಿದ್ಯಾರ್ಥಿಗಳೊಂದಿಗೆ ಚಟುವಟಿಕೆ ನಡೆಸುವ ಮೂಲಕ ನಲಿಕಲಿ ತರಗತಿ ನಡೆಸಲು ಅನುವು ಮಾಡಿಕೊಟ್ಟರು.

chinna

ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಸದಸ್ಯ ದೇವದಾಸ ಶೆಟ್ಟಿ ಎಸ್.ಕೆ.ಪಿ.ಎ ಜಿಲ್ಲಾ ಕೋಶಾಧಿಕಾರಿ ದಯಾನಂದ ಬಂಟ್ವಾಳ, ವಲಯದ ಅಧ್ಯಕ್ಷರಾದ ಸುಕುಮಾರ್ ಬಂಟ್ವಾಳ ಕಲ್ಲಡ್ಕ ವಲಯ ಪ್ರತಿನಿಧಿ ಜಯರಾಮ ರೈ, ಪದಾಧಿಕಾರಿಗಳಾದ ರವಿ ಕಲ್ಪನೆ, ಹರೀಶ್ ನಾಟಿ, ಚಿನ್ನಾ ಕಲ್ಲಡ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಂಜೀವ ಮೂಲ್ಯ ಉಪಸ್ಥಿತರಿದ್ದರು. ಶಿಕ್ಷಕಿ ಸಂಗೀತ ಶರ್ಮ ಸ್ವಾಗತಿಸಿ, ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ವಂದಿಸಿದರು, ಶಿಕ್ಷಕಿಯರಾದ ಸಿಸಿಲಿಯಾ ಹಾಗೂ ಜ್ಯೋತಿ ಸಹಕರಿಸಿದರು.

By suddi9

Leave a Reply

Your email address will not be published. Required fields are marked *