ಬಂಟ್ವಾಳ : ಮಂಚಿ ಇರಾ ಗ್ರಾಮದ ಕುಕ್ಕಾಜೆ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಸಂಘಟನೆ , ಸಂಸ್ಕಾರ , ಲೋಕಕಲ್ಯಾಣಾರ್ಥವಾಗಿ ಮಹಾಗಣಪತಿ ಹೋಮ ನಂತರ ಸೋರ್ಯೋದಯಕ್ಕೆ ಸರಿಯಾಗಿ ಅಖಂಡ ಭಜನಾ ಸಪ್ತಾಹವು ಸಾಮಾಜಿಕ ಕಾರ್ಯಕರ್ತರಾದ ವಿಶ್ವನಾಥ ಪೂಜಾರಿ ನರ್ಕಳ ಇವರಿಂದ ದೀಪೋಜ್ವಲನದ ಮೂಲಕ ಶುಭಾರಂಭಗೊಂಡಿತು. ಶ್ರೀಯುತರು ಇಂತಹಾ ಭಜನಾ ಸಪ್ತಾಹದಿಂದ ಲೋಕಕಲ್ಯಾಣವಾಗುತ್ತದೆ ಎಂದು ನುಡಿದರು.
ಧರ್ಮ ಜಾಗರಣಾ ಟ್ರಸ್ಟಿನ ಅಧ್ಯಕ್ಷ ಕೈಯೂರು ನಾರಾಯಣ ಭಟ್ ರವರು ದೇವಸ್ಥಾನದ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಸ್ತಾವಿಸಿ ಸಪ್ತಾಹದ ಎಲ್ಲಾ ದಿನಗಳಲ್ಲಿ ತುಪ್ಪದ ದೀಪವನ್ನು ಉರಿಸಲಾಗುತ್ತಿದೆ ಆದ್ದರಿಂದ ಆಸ್ತಿಕ ಬಂಧುಗಳೆಲ್ಲರೂ ದನದ ಶುದ್ಧ ತುಪ್ಪವನ್ನು ನೀಡಿ ಸಹಕರಿಸಬೇಕೆಂದರು.
ಈ ಸಂದರ್ಭದಲ್ಲಿ ಪತ್ತುಮುಡಿ ವಿಠಲ ಪ್ರಭು, ಪ್ರಶಾಂತ ಕಲ್ಲೂರಾಯ, ಸಂಜೀವ ಸಾಲ್ಯಾನ್ ಕುಕ್ಕಾಜೆ, ಸಿ.ಎಚ್.ಸೀತಾರಾಮ ಶೆಟ್ಟಿ, ಭಾಸ್ಕರ್ ಕುಲಾಲ್, ಗಣೇಶ್ ಆಚಾರ್ಯ ಕುಕ್ಕಾಜೆ, ಶೇಖರ ಡಿ, ಭಾಸ್ಕರ ಮದನಾಜೆ, ಸತೀಶ್ ಮದನಾಜೆ, ಸಂದೇಶ್, ಸಂಜಿತ್, ಶ್ರೀದೇವಿ ಕೈಯೂರು, ರ ವೀಂದ್ರ ಕುಕ್ಕಾಜೆ, ಚಂದ್ರಮೋಹನ್ ಕುಕ್ಕಾಜೆ, ರಮೇಶ್ ಪೂಜಾರಿ, ಜಗದೀಶ್ ಶೆಟ್ಟಿ ನೋಳ, ಪುಷ್ಪಾವತಿ ಮದನಾಜೆ ಮತ್ತಿತರರು ಉಪಸ್ಥಿತರಿದ್ದರು. ಭಜನಾ ಮಂಡಳಿ ಅಧ್ಯಕ್ಷ ಸತೀಶ್ ಕುಕ್ಕಾಜೆಬೈಲು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಪ್ತಾಹವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 19-11-2016ರ ಸೂರ್ಯೋದಯದವರೆಗೆ ಜರಗಲಿದೆ.
