ಮೂಡುಬಿದಿರೆ: ಆಳ್ವಾಸ್ ನುಡಿಸಿರಿಗೆ ಒಂದು ದಿನದ ಮುಂಚೆಯೇ ಸಮ್ಮೇಳನ ನಡೆಯುವ ಮೂಡುಬಿದಿರೆ ವಿದ್ಯಾಗಿರಿ ಗರಿಗೆದರಿದೆ. ಮೂರು ದಿನಗಳು ನಡೆಯುವ ಕನ್ನಡ ನಾಡು-ನುಡಿಯ ಸಮ್ಮೇಳನಕ್ಕೆ ಒಂದೆಡೆ ಭರದ ಸಿದ್ದತೆ ನಡೆಯುತ್ತಿದ್ದರೆ ಇನ್ನೊಂದೆಡೆ ವಿದ್ಯಾರ್ಥಿಸಿರಿಯ ಮೂಲಕ ವಿದ್ಯಾರ್ಥಿಗಳ ಕಲರವ.

vidhyarthisir2

vidhyarthisiri-1

vidhyarthisiri3

ವಿದ್ಯಾರ್ಥಿಸಿರಿ ಉದ್ಘಾಟಿಸಿದ ಜಯಶ್ರೀ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ನುಡಿಸಿರಿ ಸಭಾಂಗಣದಲ್ಲಿನ ರತ್ನಾಕರವರ್ಣಿ ವೇದಿಕೆಯಲ್ಲಿ ಗುರುವಾರ ನಾಲ್ಕನೇ ವರ್ಷದ ಆಳ್ವಾಸ್ ವಿದ್ಯಾರ್ಥಿಸಿರಿಯನ್ನು ರಂಗಭೂಮಿ ಕಲಾವಿದೆ ಡಾ. ಬಿ. ಜಯಶ್ರೀ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳಿಂದು ತಮ್ಮ ಆಸೆ, ಮತ್ತು ಹೆತ್ತವರ ನಿರೀಕ್ಷೆ ಹೀಗೆ ಎರಡು ಸಮಾನಾಂತರ ಗುರಿಗಳ ನಡುವೆ ಸಮನ್ವಯತೆಯನ್ನು ಸಾಧಿಸಿ ಮುನ್ನಡೆಯಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಈ ಮಕ್ಕಳಲ್ಲಿ ಎಳವೆಯಿಂದಲೇ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವ ಸಂಸ್ಕೃತಿಯನ್ನು ಬೆಳೆಸುವ ಕೆಲಸವಾಗಬೇಕಾಗಿದೆ. ಹೆತ್ತವರ ಆಸೆಗಳನ್ನು ಮಕ್ಕಳ ಮೇಲೆ ಹೇರುವುದು ಸರಿಯಲ್ಲ. ಆದರೆ ಮಕ್ಕಳನ್ನು ಕೇಳಿಸ್ಕೊಂಡು ಅವರ ಆಸೆ, ಭಾವನೆಗಳನ್ನೂ ಅರ್ಥ ಮಾಡ್ಕೊಂಡು ಅರಳಲು ಅವಕಾಶ ನೀಡಬೇಕು. ಮಾತೃಭಾಷೆಯ ಸಂಸ್ಕೃತಿಯನ್ನು ಅವರಲ್ಲಿ ಬೆಳೆಸಬೇಕು ಎಂದರು.

vidhyarthisiri-5

vidhyarthisiri7

ಆಳ್ವಾಸ್ ವಿದ್ಯಾರ್ಥಿಸಿರಿ ಅಧ್ಯಕ್ಷೆ ಅನನ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅನನ್ಯ, ವಿದ್ಯೆ ನಮ್ಮ ಹೃದಯ ಸಂಸ್ಕಾರಕ್ಕೆ ಹತ್ತಿರವಾಗಿರಬೇಕೆಂದರು.

ವಿದ್ಯಾರ್ಥಿಸಿರಿ ಪುರಸ್ಕಾರ: ಮಕ್ಕಳ ಸಾಹಿತಿ ಸಂಘಟಕ ಕಾಸರಗೋಡಿನ ವಿ.ಬಿ.ಕುಳಮರ್ವ, ಕುಂಬಳೆ, ಮಂಗಳೂರಿನ ಅನೌಪಚಾರಿಕ ಶಿಕ್ಷಣ ಪ್ರಯೋಗ ಕೇಂದ್ರ ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರ ಹಾಗೂ ಬಾಲ ಪ್ರತಿಭೆ ಚಿಕ್ಕಮಗಳೂರು ಸೈಂಟ್ ಮೇರೀಸ್ ಇಂಟರ್‍ನ್ಯಾಷನಲ್ ಶಾಲೆಯ ವೈಷ್ಣವಿ ಎನ್.ರಾವ್ ಇವರಿಗೆ ತಲಾ ಹತ್ತು ಸಾವಿರ ರೂ ಗೌರವ ನಗದು ಸಹಿತ ಆಳ್ವಾಸ್ ವಿದ್ಯಾರ್ಥಿಸಿರಿ ಪುರಸ್ಕಾರ 2016 ಪ್ರದಾನ ಮಾಡಲಾಯಿತು.

vidhyarthisiri-6

ಆಳ್ವಾಸ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರ ಶೇಖರ್ ಉಸ್ಥಿತರಿದ್ದರು.  ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಬಿ.ಆಶ್ವಿನಿ ಬಾಳಿಗಾ ಸ್ವಾಗತಿಸಿದರು. ಆಳ್ವಾಸ್ ವಿದ್ಯಾರ್ಥಿಗಳಾದ ರಚನ ಚಂದ್ರ, ಜಯಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ಜೈನ ಪ್ರೌಢಶಾಲೆಯ ವಿದ್ಯಾರ್ಥಿ ಶರತ್ ವಂದಿಸಿದರು. ಅಮೃತಾ, ತೇಜಸ್ವಿ, ರೇಣುಕಾ ಸಮ್ಮಾನಿತರ ವಿವರ ನೀಡಿದರು.

ವಿದ್ಯಾರ್ಥಿಸಿರಿ ಸಮಾಪನ
ಸುಮಾರು 8 ಗಂಟೆಗಳ ಕಾಲ ಸತತವಾಗಿ ನಡೆದ ವಿದ್ಯಾರ್ಥಿ ಸಮ್ಮೇಳನ ಕಾರ್ಯಕ್ರಮ ಗುರುವಾರ ಸಂಜೆ ಸಂಪನ್ನಗೊಂಡಿತು. ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸುಶ್ಮಿತಾ ಕೆ.ರೈ ಸಮಾರೋಪ ಭಾಷಣದಲ್ಲಿ, ವಿದ್ಯಾರ್ಥಿಸಿರಿ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ ತಿಳಿಸಿಕೊಂಡುವ ಪ್ರಯತ್ನ ಎಂದು ಶ್ಲಾಘಿಸಿದರು.

vidhyarthisiri-9

vidhyarthisiri8

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ ಚಿಂತನಾಶಕ್ತಿಯಿರಬೇಕು. ಅದಕ್ಕೆ ಪೂರಕವಾದ ಯೋಜನೆ ಪ್ರಾಮಾಣಿಕ ಬೇಕು. ಯಾರು ಸಣ್ಣ ಸಣ್ಣ ಕೆಲಸವನ್ನು ಅಚ್ಚುಕಟ್ಟುತನದಿಂದ ಮಾಡುತ್ತಾರೋ ಅಂತವರು ಪ್ರಬುದದ್ಧರಾಗಿ ನಾಯಕತ್ವಗುಣ ಬೆಳೆಸಲು ಸಾಧ್ಯ. ಹೊಸತನ, ಒಳ್ಳೆತನಗಳಿಗೆ ವಿದ್ಯಾರ್ಥಿಗಳು ತೆರೆದುಕೊಂಡರೆ ವಿದ್ಯಾರ್ಥಿಸಿರಿ ಸಮ್ಮೇಳನ ಫಲಪ್ರದ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷೆ ಅನನ್ಯ, ವಿದ್ಯಾರ್ಥಿಗಳು ವರ್ತಮಾನವನ್ನು ಪ್ರಾಶಸ್ತ್ಯ ನೀಡಿ, ಸಚ್ಚಾರಿತ್ಯವನ್ನು ಮೂಡಿಸಲು ವಿದ್ಯಾರ್ಥಿಸಿರಿಯಂತಹ ಸಮ್ಮೇಳನಗಳು ಸಹಕಾರಿಯಾಗಲಿದೆ ಎಂದರು.

By suddi9

Leave a Reply

Your email address will not be published. Required fields are marked *