ಬಂಟ್ವಾಳ : ಇಲ್ಲಿನ ಪುರಸಭೆಗೆ ಮತ್ತೆ ಗ್ರೇಡ್1 ಅಲ್ಲದ ಅನ್ಯ ಇಲಾಖೆಯ ಕಿರಿಯ ಅಧಿಕಾರಿಗಳನ್ನು ನಿಯೋಜನೆ ಮೇರೆಗೆ ನಿಯೋಜಿಸಲು ತೆರೆಮರೆಯ ಕಸರತ್ತು ನಡೆಯುತ್ತಿದ್ದು, ಪುರಸಭಾ ವ್ಯಾಪ್ತಿಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿನ ಮುಖ್ಯಾಧಿಕಾರಿಯಾಗಿದ್ದ ಆರ್ ವಿ ಜತ್ತನ್ನ ಅವರು ಕಳೆದ ಪುರಸಭಾ ಚುನಾವಣೆ ಸಂದರ್ಭ ನೀತಿ ಸಂಹಿತೆ ಉಲ್ಲಂಘಿಸಿ ಫಲಾನುಭವಿಗಳಿಗೆ ಕಪಾಟು ವಿತರಿಸಿದ ಆರೋಪದಲ್ಲಿ ಅಮಾನತುಗೊಂಡ ಬಳಿಕ ಇಲ್ಲಿಗೆ ಮಂಗಳೂರು ಮಹಾನಗರ ಪಾಲಿಕೆಯ ಕಿರಿಯ ಆರೋಗ್ಯಾಧಿಕಾರಿ ಕಳೆದ 20ಕ್ಕೂ ಅಧಿಕ ವರ್ಷಗಳಿಂದ ನಿಯೋಜನೆಯಲ್ಲೇ ಕಳೆದ ಎ ವಿ ಗಣೇಶ್ ಅವರನ್ನು ಮುಖ್ಯಾಧಿಕಾರಿಯಾಗಿ ನೇಮಿಸಲಾಗಿತ್ತು. ಭ್ರಷ್ಟಾಚಾರ ಆರೋಪದಲ್ಲಿ ಹಲವು ಕಡೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಗಣೇಶ್ ಅವರನ್ನು ಬಂಟ್ವಾಳ ಪುರಸಭೆಯ ಗ್ರೇಡ್1 ಹುದ್ದೆಗೆ ನೇಮಕಗೊಳಿಸಿದ ಕ್ರಮ ಇಲ್ಲಿನ ಪುರಸಭಾ ಸಿಬ್ಬಂದಿ, ಜನಪ್ರತಿನಿಧಿ ಸಹಿತ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಮೂರೇ ತಿಂಗಳು ಪೂರೈಸಿದ ಗಣೇಶ್ ಇದೀಗ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಗೂ ಮುನ್ನ ಮಾತೃ ಇಲಾಖೆಗೆ ಮರಳದೆ ನಿಯೋಜನೆ ಇಲಾಖೆಯಲ್ಲೇ ನಿವೃತ್ತಿ ಹೊಂದಿರುವುದೂ ವ್ಯಾಪಕ ಚಚರ್ೆಗೆ ಕಾರಣವಾಗಿತ್ತು.
ಈ ಮಧ್ಯೆ ಗಣೇಶ್ ನಿವೃತ್ತಿಯಿಂದ ತೆರವುಗೊಂಡ ಇಲ್ಲಿನ ಪುರಸಭೆಗೆ ಮತ್ತೆ ಮುಖ್ಯಾಧಿಕಾರಿಯಾಗಿ ನಿಯೋಜನೆ ಆಧಾರದಲ್ಲೇ ನೇಮಿಸುವ ಕಸರತ್ತು ರಾಜಕೀಯ ವಲಯದಲ್ಲಿ ಗರಿಗೆದರಿರುವ ಬಗ್ಗೆ ಇಲ್ಲಿನ ಜನ ತೀವ್ರ ಅಸಮಾಧಾನಗೊಳ್ಳುವಂತೆ ಮಾಡಿದೆ. ಅನ್ಯ ಇಲಾಖೆಯ ಒಂದಿಬ್ಬರು ಆಕಾಂಕ್ಷಿಗಳು ಈಗಾಗಲೇ ವಿವಿಧ ರಾಜಕೀಯ ಪ್ರಭಾವ ಬಳಸಿ ಸಚಿವರ ಮಟ್ಟದಲ್ಲಿ ತಮ್ಮ ಲಾಬಿಯನ್ನು ಚಾಲ್ತಿಯಲ್ಲಿಟ್ಟಿರುವುದು ಬೆಳಕಿಗೆ ಬಂದಿದೆ. ಕೆಎಂಎಸ್ ಅಥವಾ ಕೆಎಂಎಸ್ ಆದ ಅಧಿಕಾರಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಗ್ರೇಡ್1 ಹುದ್ದೆಗೆ ಅನರ್ಹ ವ್ಯಕ್ತಿಗಳನ್ನು ತಂದು ಕೂರಿಸುವುದರ ಹಿಂದಿನ ಉದ್ದೇಶ ಏನು ಎಂಬ ಸಂಶಯ ಇಲ್ಲಿನ ನಾಗರಿಕರದ್ದು.
ತಕ್ಷಣ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು ಸೂಕ್ತ ಗಮನ ಹರಿಸಿ ಈಗಾಗಲೇ ಗಣೇಶ್ ಆಗಮನದಿಂದ ಕಕ್ಕಾಬಿಕ್ಕಿಯಾಗಿರುವ ಬಂಟ್ವಾಳ ಪುರಸಭೆಗೆ ಅರ್ಹ ಅಭ್ಯಥರ್ಿಗಳನ್ನು ಮುಖ್ಯಾಧಿಕಾರಿಯನ್ನಾಗಿ ನೇಮಿಸಿ ಇಲ್ಲಿನ ಜನರ ಬವಣೆಗೆ ಸ್ಪಂದಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
 ಖುದ್ದು ಕಛೇರಿಗೆ ಭೇಟಿಯಾಗಿ ಅಜರ್ಿ ನೀಡಿದರೂ ಸ್ವೀಕೃತಿ ಪ್ರತಿಯಲ್ಲಿ ‘ಒಂದು ಲಕೋಟೆ/ ಅಂಚೆ ತಲುಪಿರುತ್ತದೆ. ವಿಷಯ ತಿಳಿಯದು’ ಎಂಬ ವಿಲಕ್ಷಣ ಮೊಹರು ಹಾಕಿ ಪ್ರತಿ ನೀಡುತ್ತಿರುವ ವಿದ್ಯಾಮಾನಗಳು ಮಂಗಳೂರು ಮಹಾನಗರ ಪಾಲಿಕೆ ಕಛೇರಿಯಲ್ಲಿ ಕಂಡು ಬರುತ್ತಿದೆ. 

01 July Purasabhe

ಪ್ರತಿ ಬಾರಿಯೂ ಇಲ್ಲಿ ಅಜರ್ಿ ನೀಡುವಾಗ ಇದೇ ರೀತಿಯ ಮೊಹರು ಹಾಕಿ ಸ್ವೀಕೃತಿ ಪ್ರತಿ ನೀಡುತ್ತಿದ್ದು, ಇತ್ತೀಚೆಗೆ ಅಜರ್ಿ ನೀಡಲು ತೆರಳಿದ ಬಂಟ್ವಾಳದ ವ್ಯಕ್ತಿಯೋರ್ವರು ಈ ಮೊಹರನ್ನು ಕಂಡು ಅಚ್ಚರಿಗೊಂಡು ಅದನ್ನು ಪತ್ರಿಕೆಯ ಗಮನಕ್ಕೆ ತಂದಿದ್ದಾರೆ. ಅಜರ್ಿಯನ್ನು ಯಾವುದೇ ಲಕೋಟೆಗೆ ಹಾಕದೆ ಕೇವಲ ಬಿಳಿ ಹಾಳೆಯಲ್ಲಿ ಬರೆದು ನೇರವಾಗಿ ಕಛೇರಿ ಸಿಬ್ಬಂದಿಗಳಲ್ಲಿ ಬಿಡಿಸಿಯೇ ನೀಡಲಾಗುತ್ತಿದ್ದರೂ ಸ್ವೀಕೃತಿ ಪ್ರತಿ ಮೇಲೆ ‘ಒಂದು ಲಕೋಟೆ/ ಅಂಚೆ ತಲುಪಿರುತ್ತದೆ. ವಿಷಯ ತಿಳಿಯದು’ ಎಂದು ಮೊಹರು ಹಾಕಲಾಗುತ್ತಿದೆ. ಇದು ಯಾವ ತರಹದ ಮೊಹರು ಎಂಬುದಾಗಿ ಅಜರ್ಿದಾರ ಪ್ರಶ್ನಿಸಿದ್ದಾರೆ.
ಈ ರೀತಿಯ ವಿಲಕ್ಷಣ ಹಾಗೂ ಸ್ವಾರಸ್ಯಕರ ರೀತಿಯ ಮೊಹರು ಅಚ್ಚೊತ್ತಿರುವ ಬಗ್ಗೆ ಪಾಲಿಕೆಯ ಆಯುಕ್ತರ ಗಮನಕ್ಕಾಗಲೀ, ಮೇಯರ್ ಅವರ ಗಮನಕ್ಕಾಗಲೀ ಬರಲಿಲ್ಲವೇ ಎಂಬ ಪ್ರಶ್ನೆಯನ್ನು ಅಜರ್ಿದಾರ ಸಹಜವಾಗಿಯೇ ಪತ್ರಿಕೆ ಮುಖಾಂತರ ಕೇಳುತ್ತಿದ್ದಾರೆ.

01 July Seal
ಸೀಲ್ : ಸ್ವೀಕೃತಿ ಪತ್ರಕ್ಕೆ ಹಾಕಿರುವ ವಿಲಕ್ಷಣ ಮೊಹರ

By suddi9

Leave a Reply

Your email address will not be published. Required fields are marked *