ಬಂಟ್ವಾಳ: ಮನೆ ಮನೆಗೆ ತೆರಳಿ ಮತಾಂತರಕ್ಕೆ ಯತ್ನಿಸಿದ ಆರೋಪದಲ್ಲಿ ಓರ್ವ ಮಹಿಳೆ ಸಹಿತ ಇಬ್ಬರನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದ ಘಟನೆ ಮಂಗಳವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆದಿದೆ.

crime-1

ಬಿ.ಸಿ.ರೋಡ್ ಬಸ್ ನಿಲ್ದಾಣದ ಹಿಂಬದಿಯ ಮನೆಯೊಂದಕ್ಕೆ ಮಂಗಳವಾರ ಸಂಜೆ ವ್ಯಕ್ತಿಯೊಬ್ಬರೊಂದಿಗೆ ಆಗಮಿಸಿದ ಮಹಿಳೆ ವೆಬ್ ಸೈಟ್ ವೊಂದರ ಬಗ್ಗೆ ಮಾಹಿತಿ ನೀಡುವ ನೆಪದಲ್ಲಿ ಮನೆಯಲ್ಲಿದ್ದ ಮಹಿಳೆಗೆ ಬೈಬಲ್ ಗ್ರಂಥದ ವಚನಗಳನ್ನು ಉಚ್ಚರಿಸಿದಾಗ ಅನುಮಾನಗೊಂಡ ಮಹಿಳೆ ಆಕೆಯನ್ನು ಪ್ರಶ್ನಿಸಿದ್ದಾರೆ.

ಈ ಸಂದಭ೯ದಲ್ಲಿ ಇಬ್ಬರು ಗಲಿಬಿಲಿಗೊಂಡರೆನ್ನಲಾಗಿದೆ. ತಕ್ಷಣ ಹಿಂದು ಮಹಿಳೆ ಸಂಘ ಪರಿವಾರದ ಮುಖಂಡರಿಗೆ ಮಾಹಿತಿ ನೀಡಿದರು. ಈ ಸುದ್ದಿ ಪೊಲೀಸರಿಗೂ ತಲುಪಿತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ನಗರ ಪೊಲೀಸರು ಮಹಿಳೆ ಹಾಗೂ ಅವರೊಂದಿಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಶಕ್ಕೆ ಪಡೆದಿರುವ ಮಹಿಳೆಯ ಸಹಿತ ಇಬ್ಬರ ಹೆಸರು, ವಿಳಾಸ ತಕ್ಷಣಕ್ಕೆ ತಿಳಿದುಬಂದಿಲ್ಲ.

By suddi9

Leave a Reply

Your email address will not be published. Required fields are marked *