ಉಳ್ಳಾಲ: ಜನರ ಆರೋಗ್ಯದ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಸಂಘಟಿಸುವ ಕಾರ್ಯ ಆಗಬೇಕಾಗಿದ್ದು, ರಕ್ತದ ಕೊರತೆಯಿಂದ ಅದೆಷ್ಟೋ ರೋಗಿಗಳು ತೊಂದರೆ ಅನುಭವಿಸುತ್ತಾರೆ. ಈ ನಿಟ್ಟಿನಲ್ಲಿ ದ.ಕ ಮಾನವ ಹಕ್ಕುಗಳ ಸಮಿತಿಯು ರಕ್ತದಾನದಂತಹ ಕಾರ್ಯ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ಮೂಡ ಅಧ್ಯಕ್ಷ ಸುರೇಶ್ ಬಳ್ಳಾಲ್ ಅಭಿಪ್ರಾಯಪಟ್ಟರು.

blood-camp

ಅವರು ತೊಕ್ಕೊಟ್ಟು ಒಳಪೇಟೆಯ ಕ್ಲಿಕ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ದ.ಕ ಮಾನವ ಹಕ್ಕುಗಳ ಸಮಿತಿಯು ಭಾರತೀಯ ರೆಡ್‍ಕ್ರಾಸ್ ಇವರ ಸಹಯೋಗದೊಂದಿಗೆ ಏರ್ಪಡಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

man-power

ಉತ್ತಮ ಆರೋಗ್ಯಕ್ಕೆ ರಕ್ತದಾನ ಪೂರಕವಾಗಿದ್ದು, ಪುರುಷರು ವರ್ಷಕ್ಕೆ ನಾಲ್ಕು ಬಾರಿ ಮಹಿಳೆಯರು ಎರಡು ಬಾರಿ ರಕ್ತ ನೀಡಿದರೆ ಉತ್ತಮ. ರಕ್ತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಆಗಬೇಕಾಗಿದ್ದು, ರಕ್ತದಾನ ನೀಡಿದವರ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.

man-2

ಕಾರ್ಯಕ್ರಮದಲ್ಲಿ ಹೋಂ ಗಾಡ್ರ್ಸ್ ಕಮಾಂಡೆಂಡ್ ಡಾ| ಮುರಳಿಧರ್ ಚುಂತಾರ್, ಮಾನವ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷ ಜೋಜೋ ಜೋಸೆಪ್, ಪೊಸಕುರಳ್ ಮಾಧ್ಯಮ ನಿದೇರ್ಶಕ ವಿದ್ಯಾಧರ್ ಶೆಟ್ಟಿ, ದ.ಕ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಎಚ್.ಇಸ್ಮಾಯಿಲ್ ಶಾಫಿ, ಉಪಾಧ್ಯಕ್ಷ ಅನ್ವರ್ ಹುಸೈನ್ ಕೆ.ಪಿ, ಮಾನವ ಹಕ್ಕುಗಳ ಸಮಿತಿ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ನೌಷಾದ್ ಕೋಟೆಪುರ, ಉಪಾಧ್ಯಕ್ಷ ತೌಸೀಫ್ ಕೋಟೆಪುರ, ಕಾನೂನು ಸಲಹೆಗಾರ ರಾಘವೇಂದ್ರ ರಾವ್, ಮಂಗಳೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಅನ್ವರ್ ಹುಸೈನ್ ಉಪಸ್ಥಿತರಿದ್ದರು.

ಈ ಸಂದರ್ಭ ಉಳ್ಳಾಲ ಠಾಣೆಗೆ 3 ಬ್ಯಾರಿಬ್ರಿಗೇಡ್ ವಿಕಲಚೇನರೊಬ್ಬರಿಗೆ ವೀಲ್ ಚೇಯರ್ ಮತ್ತು ಆರ್ಥೋಪೆಡಿಕ್ ಬೆಡ್ ಹಸ್ತಾಂತರಿಸಲಾಯಿತು. ಮಾನವ ಹಕ್ಕುಗಳ ಸಮಿತಿ ರಾಜಸ್ಥಾನ ಅಧ್ಯಕ್ಷ ಪಹಾದ್ ಸ್ವಾಗತಿಸದರು. ಅಬ್ದುಲ್ ಸತ್ತಾರ್ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *