ಬಂಟ್ವಾಳ: ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ ಇದರ ವಾರ್ಷಿಕೋತ್ಸವ ವಿಟ್ಲ ಮಾದರಿ ಶಾಲೆಯ ಸಭಾ ಭವನದಲ್ಲಿ ಜರಗಿತು.
ಸದ್ಗುರು ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಕಾಳಿ ಕಾಳಬೈರವೇಶ್ವರ ಶಿಲಾಂಜನ ಕ್ಷೇತ್ರ ಬಾಳೆಕೋಡಿ ಕನ್ಯಾನ ಇವರ ಉಪಸ್ಥಿತಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆದು ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸಭಾಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ರಾಮಣ್ಣ ಪಿಲಿಂಜ `ನಮ್ಮ ಯುವ ಪೀಳಿಗೆಯು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಸಮಾಜದಲ್ಲಿ ಅತ್ಯುನ್ನತ ಹುದ್ದೆಗಳನ್ನು ಹೊಂದ ಬೇಕು’ ಎಂದು ಯುವ ಪೀಳಿಗೆಗೆ ಸಲಹೆ ನೀಡಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಲೋಕಯ್ಯ ಸೇರಾ, ಯುವ ವೇದಿಕೆ ಅಧ್ಯಕ್ಷ ರಾಘವೇಂದ್ರ ಸುರುಳಿಮೂಲೆ, ಮಹಿಳಾ ಸಂಘದ ಅಧ್ಯಕ್ಷೆ ಚೆನ್ನಮ್ಮ ಟೀಚರ್, ರಮೇಶ್ ಕುದ್ರೆಬೆಟ್ಟು, ದೇವಪ್ಪ ಕಬಕ, ರಮೇಶ್ ಕಡಂಬು, ಐತ್ತಪ್ಪ ಅನಂತಾಡಿ, ಉಮೇಶ್ ಕೆಂಜಿಲ ಪದವು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತುಳು ಸಾಹಿತಿ ಚೆನ್ನಪ್ಪ ಅಳಿಕೆ ಇವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ 90 ಕ್ಕಿಂತ ಅಧಿಕ ಅಂಕ ಗಳಿಸಿದ ನಲಿಕೆ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಪುರಸ್ಕರಿಸಲಾಯಿತು. ಎಲ್ ಕೆ ಧರಣ್ ಮಾಣಿ ಇವರ ನೇತೃತ್ವದಲ್ಲಿ ಅಭಿಷೇಕ್ ಕನ್ಯಾನ ಇವರ ನಿರೂಪಣೆಯಲ್ಲಿ ವಿವಿಧ ವಲಯಗಳ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಜಿ ಯನ್ ರಾಮ ಸ್ವಾಗತಿಸಿದರು. ಕೇಶವ ಕಬಕ ವರದಿ ವಾಚಿಸಿದರು. ರಮೇಶ್ ಕಡಂಬು ವಂದಿಸಿದರು. ಜಯರಾಮ ಪಡ್ರೆ ಕಾರ್ಯಕ್ರಮ ನಿರೂಪಿಸಿದರು. ಶರಣ್ಯ ಸಹಕರಿಸಿದರು
