ಮೂಡುಬಿದಿರೆ: ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಕಮಿಟಿಯ 2016 – 17 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಾಲ್ಪಾಡಿ ಅಬ್ದುಲ್ ಹಮೀದ್ ಆಯ್ಕೆಯಾಗಿದ್ದಾರೆ. ಕಮಿಟಿ ಅಧ್ಯಕ್ಷ ಎಂ.ಎಂ. ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಇತರ ಪದಾಧಿಕಾರಿಗಳು: ಮುಹಮ್ಮದ್ ದೋಣಿಬಾಗಿಲು (ಗೌರವಾಧ್ಯಕ್ಷರು), ಅಬ್ದುಲ್ ಶುಕೂರ್ (ಉಪಾಧ್ಯಕ್ಷರು,) ಝಕರಿಯ್ಯ ಯೂಸುಫ್ (ಕಾರ್ಯದರ್ಶಿ), ಅಬ್ದುಲ್ ಖಾದರ್ ದೋಣಿಬಾಗಿಲು (ಜತೆ ಕಾರ್ಯದರ್ಶಿ), ಉಬೈದುಲ್ಲಾ ಶಿರ್ತಾಡಿ (ಖಜಾಂಚಿ), ಅಶ್ರಫ್ ವಾಲ್ಪಾಡಿ (ಲೆಕ್ಕ ಪರಿಶೋಧಕ) ಆಯ್ಕೆಯಾಗಿದ್ದಾರೆ.