ಮೂಡುಬಿದಿರೆ: ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ತನ್ಮಯತೆಯನ್ನು ಸಾಧಿಸಿದರೆ ಕಲಿಕೆಯಲ್ಲಿ ಪರಿಪಕ್ವವಾಗಬಹುದು. ಗೆಲುವಿನ ಗುಟ್ಟು ಎಲ್ಲರಿಗೂ ಗೊತ್ತಿರುವಚಿತದ್ದೆ. ಆದರೆ ವ್ಯಕ್ತಿತ್ವ ವಿಕಸನ ಶಿಬಿರಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮತ್ತೆ ಅವುಗಳನ್ನು ಮೆಲುಕು ಹಾಕುವ, ಜಾಗೃತಗೊಳಿಸುವ ಪ್ರಯತ್ನ. ಧನಾತ್ಮಕ ಚಿಂತನೆಯಿಂದ ಮನಸ್ಸು ಸುಸ್ಥಿತಿಯಲ್ಲಿರುತ್ತದೆ. ಸುಮನಸ್ಸಿನ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಸಿಕ್ಕರೆ ಶೈಕ್ಷಣಿಕ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದು ಶ್ರೀ ಧವಲಾ ಕಾಲೇಜಿನ ಉಪನ್ಯಾಸ, ಜೇಸಿಐ ಪೂರ್ವ ಅಧ್ಯಕ್ಷ ಸಂತೋಷ್ ಶೆಟ್ಟಿ ಹೇಳಿದರು.

ಜೇಸಿಐ ಮೂಡುಬಿದಿರೆ ತ್ರಿಭುವನ್ ಹಾಗೂ ಜಮೀಯ್ಯತುಲ್ ಫಲ್ಹಾಃ ಮೂಡುಬಿದಿರೆ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯ ಜೈನ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಶನಿವಾರ ನಡೆದ `ಗೆಲುವಿನ ಗುಟ್ಟು’ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ಪೂರ್ಣ ಪ್ರಮಾಣದ ಶ್ರಮದಿಂದ ಯಶಸ್ಸು ಸಾಧ್ಯವಾಗುತ್ತದೆ. ನಮ್ಮ ಶಾಲೆಯಲ್ಲಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಶಿಬಿರ, ಕಲಿಕೆ ಬಲವರ್ಧನೆಯನ್ನು ಹೆಚ್ಚಿಸುವ ಶಿಬಿರಗಳಿದಾಗಿ ವಿದ್ಯಾರ್ಥಿಗಳಲ್ಲಿ ಸಕಾರತ್ಮಕವಾದ ಬದಲಾವಣೆಗಳಾಗಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಇದು ಪ್ರೇರಣೆಯಾಗಿದೆ ಎಂದರು.
ಜಮೀಯ್ಯತುಲ್ ಫಲ್ಹಾಃ ಕಾರ್ಯದರ್ಶಿ ಸಲೀಂ ಹಂಡೇಲು, ವಿದ್ಯಾರ್ಥಿ ನಾಯಕಿ ಸ್ವಾತಿ ಉಪಸ್ಥಿತರಿದ್ದರು. ವಿನಯಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.