ಮೂಡುಬಿದಿರೆ: ಬೆಳುವಾಯಿಯ ಶ್ರೀಯಕ್ಷದೇವ ಮಿತ್ರ ಕಲಾಮಂಡಳಿಯ ವಿಂಶತಿ ಕಲೋತ್ಸವದ ಪ್ರಯುಕ್ತ ಮಿಜಾರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಕ್ಷಗಾನದ ಹಿರಿಯ ಅಗರಿ ರಘುರಾಮ ಭಾಗವತರನ್ನು ಸನ್ಮಾನಿಲಾಯಿತು.ಎಡಪದವು ಶ್ರೀರಾಮ ಮಂದಿರದ ಅಧ್ಯಕ್ಷ ಮುರಳೀಧರ ಶೆಟ್ಟಿ ಉದ್ಘಾಟಿಸಿದರು. ಗೋಪಾಲಕೃಷ್ಣ ದೇವಸ್ಥಾನದ ಅರ್ಚಕ ಮುರಳೀಧರ ತಂತ್ರಿ ಆಶೀರ್ವಚನವಿತ್ತರು.
ದಿ. ಬಜ್ಪೆ ದೇರಣ್ಣ ದೇವಾಡಿಗರ ಸಂಸ್ಮರಣೆಯನ್ನು ಕಲಾಮಂಡಳಿಯ ಕರ್ಯಾಧ್ಯಕ್ಷ ದೇವಾನಂದ ಭಟ್ ಮಾಡಿದರು. ಕಲಾಮಂಡಳಿಯ ಗೌರವಾಶ್ಯಕ್ಷ ಕೆ.ಶ್ರೀಪತಿ ಭಟ್ ಕರ್ಯಕ್ರನದ ಅಧ್ಯಕ್ಷತೆವಹಿಸಿ ಮಾತನಾಡಿ, ಬಲಿಪ, ಮಂಡೆಚ್ಚ ರೀತಿಯಲ್ಲಿ ಅಗರಿಯವರ ಪರಂಪರೆಯನ್ನು ಉಳಿಸಬೇಕಾಗಿದೆ.ಅಗರಿ ಶೈಲಿಯ ದಾಖಲೀಕರಣ ಅಗತ್ಯ ಎಂದರು. ನಂದಳಿಕೆ ಸುಬ್ರಹ್ಮಣ್ಯ ಬೈಪಾಡಿತ್ತಾಯ ಅಗರಿಯವರ ಬಗ್ಗೆ ಅಭಿನಂದನೆಯ ಮಾತುಗಳನ್ನಾಡಿದರು. ಡಾ. ಪ್ತಶಾಂತ್ ಕುಮಾರ್, ರಾಜೇಶ್ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯದರ್ಶಿ ರವಿ ಪ್ರಸಾದ್ ಕೆ.ಶೆಟ್ಟಿ ಕಾರ್ಯಕ್ರಮ ನಿರೂಪಸಿದರು.