ಬಂಟ್ವಾಳ: ಮಂಗಳೂರು ನಗರಕ್ಕೆ ನೀರು ಪೂರೈಸಲು ನೇತ್ರಾವತಿ ಸದಿಗೆ ಅಡ್ಡಲಾಗಿ 11 ಮೀ.ಎತ್ತರದ ಡ್ಯಾಂ ನಿರ್ಮಿಸಿದ್ದು ಇದರಿಂದ ಜಲಾವೃತಗೊಳ್ಳಲಿರುವ ಕೃಷಿ ಭೂಮಿಗೆ ನ್ಯಾಯೋಚಿತ ಪರಿಹಾರ ಇಲ್ಲವೇ ಬದಲಿ ಕೃಷಿ ಭೂಮಿ ನೀಡಬೇಕು. ಮುಳುಗಡೆ ಪ್ರದೇಶದ ಸ್ಪಷ್ಟ ಚಿತ್ರಣದ ಲಿಖಿತ ಮಾಹಿತಿ ನೀಡಬೇಕಾಗಿ ನಗರ ಪಾಲಿಕೆ,ಪುರಸಭೆ,ಗ್ರಾಮ ಪಂಚಾಯತ್,ತಾಲೂಕು ಪಂಚಾಯತ್,ಜಿಲ್ಲಾ ಪಂಚಾಯತ್ ಶಾಸಕರು,ಸಂಸದರು,ಮುಖ್ಯ ಮಂತ್ರಿಗಳು,ರಾಜ್ಯಪಾಲರು ಎಲ್ಲರಿಗೂ ಲಿಖಿತ ಮನವಿ ನೀಡಿದ್ದರು. 2004ರಿಂದ ತಾಲೂಕು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ನ್ಯಾಯೋಚಿತ ಪರಿಹಾರ ನೀಡಿದ ಬಳಿಕ ಡ್ಯಾಂನಲ್ಲಿ ನೀರು ಸಂಗ್ರಹಿಸಲಾಗುವುದು ಎಂಬುದಾಗಿ ಪ್ರತಿ ಬಾರಿ ಹೇಳಿಯೂ ಗ್ರಾಮ ಪಂಚಾಯತ್ ಅಧ್ಯಕ್ಷರು,ಸದಸ್ಯರು,ಪುರಸಭೆ ಅಧ್ಯಕ್ಷರು,ಸದಸ್ಯರು,ಜಿ.ಪಂ.ಅಧ್ಯಕ್ಷರು,ಸದಸ್ಯರು,ಶಾಸಕರು,ನಗರಪಾಲಿಕೆ ಅಧಿಕಾರಿ ಮೇಯರ್, ಜಿಲ್ಲಾ„ಕಾರಿಗಳು, ತಹಶೀಲ್ದಾರ್,ಒಳಚರಂಡಿ ಇಲಾಖಾ ಆಯುಕ್ತರು,ನಗರಾಭಿವೃದ್ಧಿ ಸಚಿವರು,ಉಸ್ತುವಾರಿ ಸಚಿವರು ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಂತ್ರಸ್ತ ರೈತರಿಗೆ ನೀಡಿದ ¨ರವಸೆ ಡ್ಯಾಂನಲ್ಲಿ 4 ಮೀ. ಮಾತ್ರ ನೀರು ಸಂಗ್ರಹಿಸಲಾಗುವುದು ಸೂಕ್ತ ಪಿಹಾರ ನೀಡಿದ ಬಳಿಕವೇ ನೀರು ತುಂಬಿಸಲಾಗುವುದು ಸುಳ್ಳಾಗಿದ್ದು ರೈತರಿಗೆ ಚಿಕ್ಕಾಸು ಪರಿಹಾರ ನೀಡದೆ ಡ್ಯಾಂನಲ್ಲಿ ನೀರು ತುಂಬಿಸಿ ಗಂಗಾಪೂಜೆ ನೆರವೇರಿಸಿದ ರೈತ ವಿರೋದಿ ಕ್ರಮವನ್ನು ಖಂಡಿಸಿ ರೈತರಿಗೆ ನ್ಯಾಯ ಒದಗಿಸುವಂತೆ ದೇಶದ ಪ್ರದಾನಿ ನರೇಂದ್ರ ಮೋದಿಯವರಿಗೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಅವರು ಲಿಖಿತ ಮನವಿ ಸಲ್ಲಿಸಿರುತ್ತಾರೆ.
![]()
2004ರಲ್ಲಿ ಪರಿಹಾರಕ್ಕೆ 3 ಕೋ.ರೂ ತೆಗೆದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು. 2011ರಲ್ಲಿ 500 ಕೋ.ರೂ.ಪರಿಹಾರಕ್ಕೆ ಅಗತ್ಯವಿದ್ದು ಉಸ್ತುವಾರಿಸಚಿವರು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದರು. 2016ರಲ್ಲಿ 50 ಕೋ.ರೂ. ಪರಿಹಾರಕ್ಕೆ ಬೇಕಾಗಿದ್ದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ನಗರಪಾಲಿಕೆ ಮೇಯರ್ ಹೇಳಿದ್ದು,ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಗರಪಾಲಿಕೆ ಆಯುಕ್ತರು 10 ಕೋ.ರೂ.ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದು ಇದು ರೈತರ ವಿರುದ್ಧ ಸರಕಾರ ದಬ್ಬಾಳಿಕೆ ಮಾಡಿದಂತಾಗಿದೆ.ಮಾರ್ಚ್ 23ರ ಜಿಲ್ಲಾಧಿಕಾರಿಗಳ ಆದೇಶದಂತೆ ಡ್ಯಾಂನಲ್ಲಿ ನೀರು ಸಂಗ್ರಹಿಸುವಾಗ ವೈಜ್ಞಾನಿಕವಾಗಿ ಶಿಪಾರಸ್ಸುಗೊಂಡಂತೆ 1ಮೀ.ಎತ್ತರಕ್ಕೆ ಹೆಚ್ಚುವರಿಯಾಗಿ ವರತೆ ಪ್ರದೇಶ ಮುಳುಗಡೆ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದು ಇದನ್ನೆಲ್ಲಾ ಮರೆತು ಏಕಾಏಕಿ ಸಾರ್ವಜನಿಕರಿಗೆ ಮುಂಜಾಗ್ರತಾ ದೃಷ್ಟಿಯಿಂದ ನಿಯಾಮಾವಳಿಯಂತೆ ಪೂರ್ವ ಸೂಚನೆ ನೀಡದೆ ರೈತರಿಗೆ ಸೂಕ್ತ ನ್ಯಾಯೋಚಿತ ಪರಿಹಾರ ನೀಡದೆ ಜಿಲ್ಲಾಡಳಿತ ತಿಳಿಸಿದ್ದಕ್ಕಿಂತ ಹೈಚ್ಚಿನ ಕೃಷಿಭೂಮಿ ಮುಳುಗಿಸಿದ್ದನ್ನು ವಿವರಿಸಿ ರೈತರ ಹಿತಾಶಕ್ತಿ ಕಾಪಾಡಿ ರೈತರಿಗಾದ ಅನ್ಯಾಯ ಸರಿಪಡಿಸುವಂತೆ ಪತ್ರದಲ್ಲಿ ವಿವರಿಸಲಾಗಿದೆ.