ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ನಿರುದ್ಯೋಗಿ ಯುವ ಜನರಿಗೆ 2016-17ರ ಸಾಲಿನಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ ನಲ್ಮ್ ಅಭಿಯಾನದ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ವಿವಿಧ ತರಬೇತಿಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

deen-dayal

ಆಸಕ್ತರು ರೇಷನ್‍ಕಾರ್ಡ್, ಆಧಾರ್ ಕಾರ್ಡ್, ವಿದ್ಯಾರ್ಹತಾ ಸರ್ಟಿಫಿಕೆಟ್‍ಗಳ ಪ್ರತಿಗಳೊಂದಿಗೆ ಅರ್ಜಿಯನ್ನು ಡಿ.30ರೊಳಗೆ ಪುರಸಭಾ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಲಘುವಾಹನ ತರಬೇತಿ, ಕಂಪ್ಯೂಟರ್ ಫಂಡಮೆಮಟಲ್, ಎಂ.ಎಸ್.ಆಫೀಸ್, ಇಂಟರ್‍ನೆಟ್, ಅಕೌಂಟಿಂಗ್ ಆಂಡ್ ಟ್ಯಾಲಿ ತರಬೇತಿ ಇದ್ದು ಆಯ್ಕೆಯಾದ ಫಲಾನುಭವಿಗಳಿಗೆ ಆದೇಶ ಪ್ರತ್ರ ನೀಡಲಾಗುವುದು ಎಂದು ಪುರಸಭೆಯ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *