ಬಂಟ್ವಾಳ: ಮಾಜಿ ಪ್ರಧಾನ ಮಂತ್ರಿ ದಿ. ಚೌಧರಿ ಚರಣ ಸಿಂಗ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ಬಂಟ್ವಾಳ ಕೃಷಿ ಇಲಾಖೆಯ ಆತ್ಮಯೋಜನೆಯ ವತಿಯಿಂದ ಕಾವಳಪಡೂರು ಗ್ರಾಮದ ಪಚ್ಚಾಜೆ ಸಭಾ ಭವನದಲ್ಲಿ ಶುಕ್ರವಾರ ರೈತ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

7675

ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಇಲಾಖೆಯ ಪ್ರಭಾರ ತಾಂತ್ರಿಕ ಅಧಿಕಾರಿ ನಂದನ್ ಶೆಣೈ, ಮಾಜಿ ಪ್ರಧಾನ ಮಂತ್ರಿ ದಿ. ಚೌಧರಿ ಚರಣ ಸಿಂಗ್ ತಮ್ಮ ಅಧಿಕಾವಧಿಯಲ್ಲಿ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರ ಏಳಿಗೆಗಾಗಿ ಶ್ರಮಿಸಿದ್ದರು. ಇವರ ನೆನಪಿಗಾಗಿ ಅವರ ಜನ್ಮದಿನವನ್ನು ದೇಶದಾದ್ಯಂತ ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ದೇಶದ ಬೆನ್ನೆಲುಬಾದ ರೈತರನ್ನು ಗೌರವಿಸಿ ಸನ್ಮಾನಿಸುವ ಸುದಿನವಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾವಳಪಡೂರು ಗ್ರಾಮ ಪಂಚಾಯತ್ ಸದಸ್ಯ ಜಿನರಾಜ ಅರಿಗ ಮಾತನಾಡಿ, ರೈತರು ಇಲಾಖೆಗಳಲ್ಲಿ ದೊರೆಯುವ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ತಾಲೂಕು ಪಂಚಾಯತ್ ಸದಸ್ಯ ಧನಲಕ್ಷಿ ಬಂಗೇರ, ಕಾವಳಪಡೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಾಸುದೇವಗೌಡ, ಧರ್ಮಪಾಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾವಳಪಡೂರು, ಮಾಣಿಕ್ಯ ರಾಜ ಜೈನ ಮಾಜಿ ಆಧ್ಯಕ್ಷ ಕಾವಳಪಡೂರು, ಗ್ರಾಮ ಪಂಚಾಯತ್ ಡಾ|ಕೃಷ್ಣಪ್ಪ ಪಶುವೈದ್ಯಾಧಿಕಾರಿ ಬಂಟ್ವಾಳ, ಸಹಾಯಕ ತೋಟಗಾರಿಕ ಅಧಿಕಾರಿ  ನಂದಿನಿ, ಸಹಾಯಕ ಕೃಷಿ ಅಧಿಕಾರಿ ನಾರಾಯಣ ನಾಯ್ಕ, ಆತ್ಮ ಯೋಜನೆಯ ಪ್ರಿಯಾಂಕ ಮತ್ತು ಹಣವಂತ ಕಾಳಗಿ ಉಪಸ್ಥಿತರಿದರು, ಕಾರ್ಯಕ್ರಮದಲ್ಲಿ ತಾಲೂಕಿನ 5 ಜನ ಪ್ರಗತಿ ಪರ ರೈತರನ್ನು ಗುರುತಿಸಿ ಶ್ರೇಷ್ಠ ಕೃಷಿಕ ಎಂದು ಪರಸ್ಕರಿಸಲಾಯಿತು. ಕಾರ್ಯಕ್ರಮವನ್ನು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಲಾಯಿತು.

By suddi9

Leave a Reply

Your email address will not be published. Required fields are marked *