ಮುಂಬಯಿ : ಇರಾಕ್‌ನಲ್ಲಿ ಐಎಸ್‌ಐಎಸ್ ಉಗ್ರರ ವಶದಿಂದ ಬಿಡುಗಡೆಯಾದ 46 ನರ್ಸ್‌ಗಳಸಹಿತ 137 ಇತರ ಭಾರತೀಯರನ್ನು ಹೊತ್ತಿದ್ದ ವಿಮಾನ ಶನಿವಾರ ಮುಂಬೈಗೆ ಬಂದಿಳಿದಿದೆ.
183 ಭಾರತೀಯರನ್ನು ಹೊತ್ತಿದ್ದ ವಿಶೇಷ ಎರ್ ಇಂಡಿಯಾ ಮೋಯಿಂಗ್ 777 ವಿಮಾನ ಇರಾಕ್‌ನ ಎರ್ಬಿಲ್ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ 8.43 ರ ವೇಳೆಗೆ ಮುಂಬಯಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ವಿಮಾನಕ್ಕೆ ಇಂಧನ ತುಂಬಿಸಲು ಹಾಗು ಆಹಾರ ವಸ್ತುಗಳ ಪೊರೈಕೆ ಮಾಡುವ ಸಲುವಾಗಿ ಮುಂಬೈನಲ್ಲಿ ವಿಮಾನ ನಿಲುಗಡೆ ಮಾಡಲಾಗಿತ್ತು.
ವಿಮಾನಮಧ್ಯಾಹ್ನ 12 ಗಂಟೆಯ ವೇಳೆಗೆ ಕೊಚ್ಚಿಗೆ ತಲುಪಲಿದ್ದು ವಿಮಾನದಲ್ಲಿರುವ ಮಲಯಾಳಿ ನರ್ಸ್‌ಗಳನ್ನು ಕೇರಳ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಬರಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ವಿಮಾನದಲ್ಲಿ ಹೈದರಾಬಾದ್ ಮೂಲದ 100 ಜನರಿದ್ದು ಕೊಚ್ಚಿಯಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದೆ ಎಂದು ವರದಿಯಾಗಿದೆ.
